ಜೆಡಿಎಸ್ ನಿಂದ ಹೊರ ಹಾಕಿದ್ದಕ್ಕೆ ಅಹಿಂದ ಸಮಾವೇಶ ಶುರು ಮಾಡಿದ್ದು: ಸಿಎಂ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜೆಡಿಎಸ್ ನಿಂದ ನನ್ನ ಹೊರ ಹಾಕಿದ್ದಕ್ಕೆ ಅಹಿಂದ ಸಮಾವೇಶ ಶುರು ಮಾಡಿದ್ದು. ಇನ್ಮುಂದೆ ಪಕ್ಷ ಬಿಟ್ಟರು ಅಂತ ಹೇಳಬೇಡಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ನಿಂದ ಹೊರ ಹಾಕಿದ್ದಕ್ಕೆ ಅಹಿಂದ ಸಮಾವೇಶ ಶುರು ಮಾಡಿದ್ದು. ಇನ್ಮುಂದೆ ಪಕ್ಷ ಬಿಟ್ಟರು ಅಂತ ಹೇಳಬೇಡಿ. ಹಾಸನದಲ್ಲೂ ನಾನು ಅಹಿಂದ ಸಮಾವೇಶವನ್ನು ಮಾಡಿದ್ದೇನೆ. ಈಗ ಅಭಿನಂದನೆ ಹೇಳುವುದಕ್ಕೆ ಸಮಾವೇಶ ಮಾಡುತ್ತಿರುವುದು. ಜನರು ಕಾರ್ಯಕರ್ತರಿಗೆ ಅಭಿನಂದನೆ ಹೇಳಲು ಸಮಾವೇಶ ಮಾಡುತ್ತೇವೆ ಸರ್ಕಾರ, ಕೆಪಿಸಿಸಿ, ಸ್ವಾಭಿಮಾನಿ ಒಕ್ಕೂಟ ಸೇರಿ ಸಮಾವೇಶ ಮಾಡುತ್ತಿದ್ದೇವೆ.ಸಮಾವೇಶಕ್ಕೆ ಮಲ್ಲಿಕಾರ್ಜುನ ಖರ್ಗೆ ರಣದೀಪ ಸಿಂಗ್ ಸುರ್ಜೆವಾಲ ಅವರಿಗೂ ಆಹ್ವಾನ ನೀಡಲಾಗಿದೆ ಎಂದರು.

ಜೆಡಿಎಸ್ ಪಕ್ಷ ಕಟ್ಟಿದ್ದು ನಾವು ಈಗ ಆ ಪಕ್ಷ ಜಾತ್ಯಾತೀತ ಆಗಿದೆಯಾ? ಜೆಡಿಎಸ್ ನವರು ಕೋಮುವಾದಿಗಳ ಜೊತೆಗೆ ಸೇರಿದ್ದಾರೆ. ನಾವು ಪಕ್ಷ ಕಟ್ಟುವಾಗ ಹೆಚ್‍ಡಿ ಕುಮಾರಸ್ವಾಮಿ ಇರಲಿಲ್ಲ ಕುಮಾರಸ್ವಾಮಿ ಸುಳ್ಳು ಹೇಳುತ್ತಿದ್ದಾರೆ ಆಗ ಅವರು ಇರಲೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ನಾನು ದೇವೇಗೌಡ, ಇಬ್ರಾಹಿಂ, ಸತೀಶ್ ಜಾರಕಿಹೊಳಿ, ಮಹದೇವಪ್ಪ, ವೆಂಕಟೇಶ್, ಲಕ್ಷ್ಮೀ ಸಾಗರ್ ಸೇರಿ ಆಗಿದ್ದು. ದೇವೇಗೌಡರು ರಾಷ್ಟ್ರೀಯ ಅಧ್ಯಕ್ಷರಾದರು, ನಾನು ರಾಜ್ಯಾಧ್ಯಕ್ಷನಾದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here