ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾವೇರಿ ನಿವಾಸದಲ್ಲಿ ಜನರ ಸಮಸ್ಯೆ ಆಲಿಸಿ ಅರ್ಜಿ ಸ್ವೀಕರಿಸುವ ವೇಳೆ ಸಿಎಂ ಸಿದ್ದರಾಮಯ್ಯ ಕೈಗೆ ಗುಂಡು ಪಿನ್ ಚುಚ್ಚಿ ಗಾಯವಾಗಿದ್ದು, ಗಾಯವಾಗಿದ್ದ ಜಾಗಕ್ಕೆ ಕರ್ಚಿಫ್ ಸುತ್ತಿಕೊಂಡು ಸಿದ್ದರಾಮಯ್ಯ ಸಭೆಗೆ ತೆರಳಿದ್ದಾರೆ.
ಸಮಿತಿ ಕೊಠಡಿ 313ರ ಬಳಿ ಘಟನೆ ನಡೆದಿದೆ. ಈ ವೇಳೆ ಅಧಿಕಾರಿಗಳು ಏನು ಮಾಡಬೇಕು ಎಂದು ತೋಚದೆ ಕಕ್ಕಾಬಿಕ್ಕಿಯಾಗಿದ್ದಾರೆ. ಅಲ್ಲಿಯೇ ಕರ್ಚೀಫ್ ಸುತ್ತಿಕೊಂಡು ಸಿಎಂ ಸಭೆಗೆ ಹೋಗಿದ್ದಾರೆ. ವಿಧಾನಸೌಧಕ್ಕೆ ಆಗಮಿಸಿದ ವೇಳೆಯೂ ರಕ್ತ ನಿಂತಿರಲಿಲ್ಲ. ಹೀಗಾಗಿ ವೈದ್ಯರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣವೇ ಆಗಮಿಸಿದ ವೈದ್ಯರು ವಿಧಾನಸೌಧ ಸಮಿತಿ ಕೊಠಡಿಯಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಸಿಎಂಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ರಾಜ್ಯ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತರು, ಮಾಹಿತಿ ಆಯುಕ್ತರ ನೇಮಕ ಸಂಬಂಧ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸಭೆ ನಡೆಯುತ್ತಿದೆ.