September 30, 2026
Wednesday, September 30, 2026
spot_img

ಬೆಣ್ಣೆ ಹಳ್ಳ ನಿಯಂತ್ರಣ ಯೋಜನೆಗೆ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಣ್ಣೆ ಹಳ್ಳ ಪ್ರವಾಹದ ನಿಯಂತ್ರಣ ಮೊದಲ ಹಂತದಲ್ಲಿ ೨೦೦ ಕೋಟಿ ರೂ. ಯೋಜನೆಗ ಮುಖ್ಯ ಮಂತ್ರಿ ಸಿದ್ದರಾಮಯ್ಯ ಭಾನುವಾರ ಶಂಕುಸ್ಥಾಪನೆ ನೆರವೇರಿಸಿದರು.

ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಸಮಾರಂಭದಲ್ಲಿ ಕಾನೂನು‌ ಸಚಿವ ಎಚ್.ಕೆ. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ಪ್ರಸಾದ ಅಬ್ಬಯ್ಯ, ವಿಧಾನ ಪರಿಷತ್ ಸದಸ್ಯ ಸಲೀಂ ಅಮ್ಮದ, ಎಫ್.ಎಚ್.‌ಜಕ್ಕಪ್ಪನವರ ಸೇರಿದಂತೆ ರಾಜ್ಯ ಸರ್ಕಾರ ಜನಪತ್ರಿನಿಧಿಗಳು ಭಾಗವಹಿಸಿದ್ದು, ನವಲಗುಂದ ವಿಧಾನ ಸಭಾ ಕ್ಷೇತ್ರ ಹಾಗೂ ಧಾರವಾಡ ಜಿಲ್ಲೆಯ ಸಾವಿರಾರೂ ಜನರು ಸಮಾರಂಭಕ್ಕೆ ಸಾಕ್ಷಿಯಾದರು. ನವಲಗುಂದ ಶಾಸಕ ಎನ್.ಎಚ್. ಕೋನರೆಡ್ಡಿ ಅವರು ಪ್ರಾಸ್ತಾವಿಕ ಮಾತನಾಡಿ ಯೋಜನೆ ಕುರಿತು ಮಾಹಿತಿ ನೀಡಿದರು.

ಬೆಣ್ಣೆ ಹಳ್ಳ ನಿಯಂತ್ರಣ ಯೋಜನೆಯ ಹಾಗೂ ನವಲಗುಂದ ವಿಧಾನ ಸಭಾ ಕ್ಷೇತ್ರದಲ್ಲಿ ೧೫೦ ಕೋಟಿ ರೂ. ಅನುದಾನದಲ್ಲಿ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ದೊರೆಯಿತು.
ಅತಿಯಾದ ಮಳೆಯಾದಾಗ ಬೆಣ್ಣೆ ಹಳ್ಳದಲ್ಲಿ ಪ್ರವಾಹ ಉಂಟಾಗಿ ಸಾಕಷ್ಟು ರೈತರ ಬೆಳೆ ಹಾನಿಗಳಾಗಿವೆ. ಅದೇ ರೀತಿ ಜನರ ಮನೆಗಳಿಗೂ ಹಳ್ಳದ ನೀರು ನುಗ್ಗಿ ಅನೇಕ ತೊಂದರೆಗಳಾಗಿವೆ. ಇದನ್ನು ಮನಗಂಡು ನಮ್ಮ ಸರ್ಕಾರ ಪ್ರವಾಹ ನಿಯಂತ್ರಣ ಕಾಮಗಾರಿಗೆ ಚಾಲನೆ ಅದ್ದೂರಿ ಚಾಲನೆ ದೊರೆಯಿತು.

Must Read