ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಡಾ ಸೈಟ್ ಹಗರಣದ ಸುದ್ದಿ ಜೋರಾಗುತ್ತಿರುವ ಸಮಯದಲ್ಲೇ ಸಿಎಂ ಸಿದ್ದರಾಮಯ್ಯ ಮೇಲೆ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ಮೈಸೂರಿನಲ್ಲಿ ದಲಿತ ವಿಕಲಚೇತನ ವ್ಯಕ್ತಿಗೆ ಹಂಚಿಕೆಯಾದ ಜಾಗವನ್ನ ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಅ ಜಾಗದಲ್ಲಿ ಡಿಸಿಎಂ ಆಗಿದ್ದಾಗ ಮನೆ ಕಟ್ಟಿದ್ದಾರೆ ಅಂತ ಸಿದ್ದರಾಮಯ್ಯ ಮೇಲೆ ನೇರ ಆರೋಪ ಮಾಡಿದ್ದಾರೆ.
ಮುಡಾದಲ್ಲಿ 15 ಸೈಟ್ ಅಕ್ರಮವಾಗಿ ಪಡೆದ ಪ್ರಕರಣ ಒಂದು ಕಡೆಯಾದರೆ ಇದು ಇನ್ನೊಂದು ಅಕ್ರಮ. ಸಿದ್ದರಾಮಯ್ಯ ಡಿಸಿಎಂ ಆಗಿ ಮೈಸೂರಿನಲ್ಲಿ ಮನೆ ಕಟ್ಟಿದ್ದರು. ಯಾರ ಜಾಗದಲ್ಲಿ ಸಿದ್ದರಾಮಯ್ಯ ಅವರೇ ಮನೆ ಕಟ್ಟಿದ್ದೀರಿ? ಬೇಕಾ ದಾಖಲೆ ಎಂದು ಪ್ರಶ್ನಿಸಿದರು.