Tuesday, October 3, 2023

Latest Posts

ನಾಳೆ ಬೆಳಗಾವಿಗೆ ಸಿಎಂ ಸಿದ್ದರಾಮಯ್ಯ ಭೇಟಿ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಥಣಿ ತಾಲೂಕಿನ ಕೊಕಟನುರಿನಲ್ಲಿ 80 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಪಶು ವೈದ್ಯಕೀಯ ಮಹಾವಿದ್ಯಾಲಯ ಲೋಕಾರ್ಪಣೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.

ಆ.11ರಂದು ಬೆಳಗ್ಗೆ 11.15ಕ್ಕೆ ಸಾಂಬ್ರಾ ಏರ್ ಪೋರ್ಟ್ ಗೆ ವಿಶೇಷ ವಿಮಾನದಲ್ಲಿ ಬೆಂಗಳೂರಿಂದ ಬೆಳಗಾವಿಗೆ ಆಗಮಿಸಿಲಿರುವ ಸಿಎಂ ಸಿದ್ದರಾಮಯ್ಯ ಅವರು ಸಾಂಬ್ರಾ ಏರ್ ಪೋರ್ಟ್ ನಿಂದ ಹೆಲಿಕಾಪ್ಟರ್ ನಲ್ಲಿ ಅಥಣಿಗೆ ಪ್ರಯಾಣಿಸಲಿದ್ದಾರೆ.

ಆ.11 ರಂದು ಮಧ್ಯಾಹ್ನ 12.30ಕ್ಕೆ ಅಥಣಿಯಲ್ಲಿ ಬಸವೇಶ್ವರ ಪ್ರತಿಮೆಗೆ ಲೋಕಾರ್ಪಣೆ ಮಾಡಿದ ಬಳಿಕ ಅಥಣಿಯಿಂದ ಕೊಕಟನೂರು ಗ್ರಾಮಕ್ಕೆ ತೆರಳಲಿರುವ ಸಿಎಂ, ಮಧ್ಯಾಹ್ನ ಕೋಕಟನೂರಿನ ಗ್ರಾಮದಲ್ಲಿ ವಿವಿಧ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.

ಸಂಜೆ 5:30ಕ್ಕೆ ಬೆಂಗಳೂರಿಗೆ ಸಿಎಂ ಸಿದ್ದರಾಮಯ್ಯ ವಾಪಸಾಗಲಿದ್ದಾರೆ. ಸಿಎಂಗೆ ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್, ರಾಮಲಿಂಗ ರೆಡ್ಡಿ,ಎಚ್ ಸಿ ಮಹದೇವಪ್ಪ, ಎನ್ ಎಸ್ ಬೋಸರಾಜು, ಕೆ ವೆಂಕಟೇಶ್, ಶಾಸಕ ಲಕ್ಷ್ಮಣ ಸವದಿ ಸೇರಿದಂತೆ ಹಲವರು ಸಾಥ್ ನೀಡಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!