ಇಂದು ಹೈಕಮಾಂಡ್ ಜೊತೆ ಸಿಎಂ ಸಿದ್ದು, ಡಿಸಿಎಂ ಡಿಕೆಶಿ ಫೈನಲ್ ಸಭೆ, ಯಾರಿಗೆ ಮೇಲುಗೈ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ಸರ್ಕಾರವೇನೋ ರಚನೆ ಆಯ್ತು. ಆದರೆ ಸಂಪುಟ ವಿಸ್ತರಣೆ ಸರ್ಕಸ್ ಇನ್ನೂ ಮುಗಿದಿಲ್ಲ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ತಮ್ಮ ಆಪ್ತರಿಗೆ ಸಂಪುಟದಲ್ಲಿ ಸ್ಥಾನ ಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದು, ಮತ್ತೆ ದೆಹಲಿಗೆ ತೆರಳಿದ್ದಾರೆ.

ಸಿಎಂ, ಡಿಸಿಎಂ ಸೇರಿ ಈಗಾಗಲೇ 10 ಮಂದಿ ಸ್ಥಾನ ಪಡೆದಿದ್ದಾರೆ. ಇನ್ನು 23 ಸ್ಥಾನಗಳು ಉಳಿದಿದ್ದು, ಅವುಗಳನ್ನು ಹಂಚಿಕೆ ಮಾಡಬೇಕಿದೆ.

ಸಂಪುಟದಲ್ಲಿ ಮೇಲುಗೈ ಇದ್ದಷ್ಟು ಒಳ್ಳೆಯದು ಎಂದು ಇಬ್ಬರು ನಾಯಕರು ನಂಬಿದಂತೆ ಕಾಣುತ್ತಿದ್ದು, ತಮ್ಮ ಆಪ್ತರನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಹೈಕಮಾಂಡ್ ಇದಕ್ಕೆ ಮಣೆ ಹಾಕುವ ಸಾಧ್ಯತೆ ಕಡಿಮೆಯಿದೆ, ಜಾತಿ, ಪ್ರಾಂತ್ಯ, ಪ್ರದೇಶ ಹೀಗೆ ಎಲ್ಲಕ್ಕೂ ಪ್ರಾತಿನಿಧ್ಯ ನೀಡಿ ಕಾಂಗ್ರೆಸ್ ಭೇಷ್ ಎನಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ.

ತಮ್ಮ ಬೆಂಬಲಿಗರಿಗೇ ಸಂಪುಟದಲ್ಲಿ ಸ್ಥಾನ ಬೇಕು ಎನ್ನುವ ಪೈಪೋಟಿ ಜೋರಾಗಿಯೇ ನಡೆದಿದ್ದು, ಕಗ್ಗಂಟನ್ನು ಬಿಡಿಸೋಕೆ ಹೈ ಹೈರಾಣಾಗಿದ್ದು, ಇಂದು ಎಲ್ಲವೂ ಬಗೆಹರಿಯುವ ಸಾಧ್ಯತೆ ಇದೆ. ಹೈಕಮಾಂಡ್ ನಾಯಕರ ಜೊತೆ ಸಿದ್ದು ಹಾಗೂ ಡಿಕೆಶಿ ಪ್ರತ್ಯೇಕ ಸಭೆ ನಡೆಸಿ ತಮ್ಮ ಲಿಸ್ಟ್‌ಗಳ ಬಗ್ಗೆ ಹೇಳಲಿದ್ದಾರೆ. ಇಂದು ವೇಣುಗೋಪಾಲ್ ನಿವಾಸದಲ್ಲಿ ಮೀಟಿಂಗ್ ನಡೆಯಲಿದ್ದು, ಎಲ್ಲವೂ ಫೈನಲ್ ಆಗುವ ಸಾಧ್ಯತೆ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!