ಹೊಸದಿಗಂತ ಡಿಜಿಟಲ್ ಡೆಸ್ಕ್:
ಐತಿಹಾಸಿಕ ಬೆಂಗಳೂರು ಕರಗ ಶಕ್ತ್ಯೋತ್ಸವ ತಡರಾತ್ರಿ ವಿಜ್ರಂಭಣೆಯಿಂದ ನಡೆದಿದೆ. ಸಹಸ್ರಾರು ಭಕ್ತರು ಮಲ್ಲಿಗೆ ಹೂವು ಅರ್ಪಿಸಿ ಗೋವಿಂದ.. ಗೋವಿಂದ ಎಂದು ಜೈಕಾರ ಹಾಕಿದ್ದಾರೆ. ಸದ್ಯ ನಗರ ಪ್ರದಕ್ಷಿಣೆ ಮಾಡಿ ಧರ್ಮರಾಯಸ್ವಾಮಿ ದೇಗುಲಕ್ಕೆ ಕರಗ ವಾಪಸ್ ಆಗಿದೆ.
ತಿಗಳರಪೇಟೆಯ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ ಪೂಜೆ ಸಲ್ಲಿಸಿ, ಕರಗ ಶಕ್ತ್ಯೋತ್ಸವ ಮಹಾರಥೋತ್ಸವಕ್ಕೆ ಶುಭ ಕೋರಿದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ಕರಗದ ದರ್ಶನ ಮಾಡಿದ್ದಾರೆ.
ನಸುಕಿನ ಜಾವ 3 ಗಂಟೆಗೆ ಆರಂಭವಾಗಿದ್ದ ಕರಗ ಶಕ್ತ್ಯೋತ್ಸವ, 15ನೇ ಬಾರಿ ದೇವಸ್ಥಾನದ ಅರ್ಚಕ ಜ್ಞಾನೇಂದ್ರ ಕರಗ ಹೊತ್ತರು. ಈ ವೇಳೆ ಮಲ್ಲಿಗೆ ಹೂ ಚೆಲ್ಲಿ ಭಕ್ತರು ಸಂಭ್ರಮಿಸಿದರು.