Sunday, March 26, 2023

Latest Posts

ಅಧಿವೇಶನದಿಂದ ಕ್ರೀಡಾಂಗಣದತ್ತ ಸಿಎಂ: ಸಿಸಿಎಲ್ ಪಂದ್ಯ ವೀಕ್ಷಣೆಗೆ ಬಂದ ಬೊಮ್ಮಾಯಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದಿನಿಂದ ನಡೆಯುತ್ತಿರುವ ಸಿಲೆಬ್ರಿಟಿ ಕ್ರಿಕೆಟ್ ಲೀಗ್ (CCL) ಪಂದ್ಯವನ್ನು ವೀಕ್ಷಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಸಂಜೆ ಆಗಮಿಸಿದರು.

ಅಧಿವೇಶನದ ಕೊನೆಯ ದಿನವಾಗಿದ್ದರೂ, ಅಧಿವೇಶನ ಮುಗಿಸಿಕೊಂಡು ಅವರು ಕ್ರೀಡಾಂಗಣದಲ್ಲಿ ಹಾಜರಿದ್ದರು. ಜೊತೆಗೆ ಆರೋಗ್ಯ ಸಚಿವ ಆರ್.ಸುಧಾಕರ್ ಅವರನ್ನೂ ಕರೆತಂದಿದ್ದರು.

ಈ ಸಂದರ್ಭದಲ್ಲಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಟ ರವಿಚಂದ್ರನ್, ಲಹರಿ ವೇಲು ಕ್ರಿಕೆಟ್ ತಂಡಗಳು ಸದಸ್ಯರು ಹಾಜರಿದ್ದರು.
ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಈ ಪಂದ್ಯ ನಡೆಯಲಿದೆ. ಕನ್ನಡ ಸಿನಿಮಾ ರಂಗದ ಗಣ್ಯರ ಜೊತೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರು ಕೂಡ ಈ ಪಂದ್ಯದಲ್ಲಿ ಭಾಗಿಯಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!