ದಿಗಂತ ವರದಿ ಅಂಕೋಲಾ:
ತಾಲೂಕಿನ ಶಿರೂರು ಗುಡ್ಡ ಕುಸಿತ ಪ್ರದೇಶಕ್ಕೆ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಭಾರೀ ಮಳೆ ಸುರಿದಿದ್ಧು ಮಳೆಯಲ್ಲೇ ಮುಖ್ಯ ಮಂತ್ರಿಗಳು ಘಟನಾ ಸ್ಥಳದ ವೀಕ್ಷಣೆ ಮಾಡುವಂತಾಯಿತು.
ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರು ಘಟನೆ ಕುರಿತಂತೆ ಸಂಪೂರ್ಣ ವರದಿ ಸಲ್ಲಿಸಲು ಸೂಚಿಸಿದರು.
ಈ ನಡುವೆ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಲು ನಿಂತ ದುರ್ಘಟನೆಯಲ್ಲಿ ಕಣ್ಮರೆಯಾದ ಕುಟುಂಬದ ಸದಸ್ಯರನ್ನು ಮುಖ್ಯ ಮಂತ್ರಿಗಳು ಮಾತನಾಡಿಸಲು ನಿಲ್ಲದೇ ಪ್ರವಾಸಿ ಮಂದಿರಕ್ಕೆ ಬಂದು ಭೇಟಿ ಮಾಡುವಂತೆ ಹೇಳಿ ಹೊರಟು ಹೋಗಿರುವುದು ಕುಟುಂಬಸ್ಥರ ಅಸಮಾಧಾನಕ್ಕೆ ಕಾರಣವಾಗಿದ್ದು
ರಸ್ತೆಯಲ್ಲಿ ಕಲ್ಲು ಇಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.