ರಸ್ತೆಯಲ್ಲಿ ನಮಾಜ್​ ಮಾಡುವಂತಿಲ್ಲ: ಸಿಎಂ ಯೋಗಿ ಖಡಕ್​​ ಎಚ್ಚರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಶಾಂತಿಯುತವಾಗಿ ಸರ್ಕಾರವನ್ನು ಮುನ್ನಡೆಸುತ್ತಿದ್ದು, ಸಾಕಷ್ಟು ಸುಧಾರಣೆಯನ್ನು ತಂದಿರುವ ಅವರು, ಅಪರಾಧ ಪ್ರಕರಣಗಳು ಕೂಡ ಸಾಕಷ್ಟು ತಗ್ಗಿವೆ.

ಆಜಾನ್​ ನಂತರ ಈಗ ರಸ್ತೆಯಲ್ಲಿ ನಮಾಜ್​ ಮಾಡುವಂತಿಲ್ಲ ಎಂಬ ಕಟ್ಟಪ್ಪಣೆಯನ್ನುಸಿಎಂ ಯೋಗಿ ಹೊರಡಿಸಿದ್ದಾರೆ. ಇತ್ತೀಚೆಗಷ್ಟೇ ಲೌಡ್​​ಸ್ಪೀಕರ್​​ ಬಗ್ಗೆ ಕ್ರಮ ಕೈಗೊಂಡಿದ್ದ ಅವರು ಇದೀಗ ನಮಾಜ್​ನ್ನು ಕಂಡ ಕಂಡಲ್ಲಿ ಮಾಡುವಂತಿಲ್ಲ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆರ್ಗನೈಸರ್ ಹಾಗೂ ಪಾಂಚಜನ್ಯ ನಿಯತಕಾಲಿಕೆಯ 75ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಯೋಗಿ ಆದಿತ್ಯನಾಥ್ ಯುಪಿಯಲ್ಲಿನ ಬದಲಾವಣೆ ಹಾಗೂ ರಾಷ್ಟ್ರ ಕಟ್ಟುವಲ್ಲಿ ಸರ್ಕಾರದ ಕೊಡುಗೆ ಕುರಿತು ಮಹತ್ವದ ಮಾತುಗಳನ್ನಾಡಿದ್ದಾರೆ.

ಈ ಬಾರಿ ಉತ್ತರ ಪ್ರದೇಶದಲ್ಲಿ ರಾಮನವಮಿಯನ್ನು ಅದ್ಧೂರಿಯಾಗಿ ಆಚರಿಸಲಾಗಿದೆ. ಉತ್ತರ ಪ್ರದೇಶದ ಯಾವುದೇ ಭಾಗದಲ್ಲಿ ರಾಮ ನವಮಿ ದಿನ ಹಿಂಸಾಚಾರ ನಡೆದಿಲ್ಲ. ದೇಶದ ಬಹುತೇಕ ರಾಜ್ಯಗಳಲ್ಲಿ ರಾಮ ನವಮಿ ಮೆರವಣಿಗೆ ಮೇಲೆ ಕಲ್ಲುತೂರಾಟ ನಡೆದು ಹಿಂಸಾಚಾರ, ಗಲಭೆಗಳಾಗಿದೆ. ಆದರೆ ಉತ್ತರ ಪ್ರದೇಶದಲ್ಲಿ ಶಾಂತವಾಗಿ ನಡೆದಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ದೇಶದಲ್ಲಿ ಭಾರಿ ಸದ್ದು ಮಾಡಿ ವಿವಾದಕ್ಕೆ ಕಾರಣವಾಗಿದ್ದ ಲೌಡ್‌ಸ್ಪೀಕರ್ ಪ್ರಕರಣ ಕೂಡ ಉತ್ತರ ಪ್ರದೇಶದಲ್ಲಿ ಶಾಂತವಾಗಿ ಪರಿಹಾರಗೊಂಡಿದೆ. ಅನಧಿಕೃತ ಹೆಚ್ಚವುರಿ ಧ್ವನಿಯ 45,773 ಲೌಡ್‌ಸ್ಪೀಕರ್ ತೆಗೆಸಲಾಗಿದೆ. ಇನ್ನು 58,861 ಲೌಡ್‌ಸ್ಪೀಕರ್ ಧ್ವನಿ ಮಟ್ಟವನ್ನು ಇಳಿಸಲಾಗಿದೆ. ಸರ್ಕಾರಕ್ಕೆ ವಶಕ್ಕೆ ಪಡೆದಿರುವ ಲೌಡ್‌ಸ್ಪೀಕರಗಳನ್ನು ಶಾಲೆ ಹಾಗೂ ಆಸ್ಪತ್ರೆಗಳ ಬಳಕಗೆ ನೀಡಲಾಗುವುದು ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಮದರಸಾಗಳಲ್ಲಿ ರಾಷ್ಟ್ರಗೀತೆಯನ್ನು ಕಡ್ಡಾಯಗೊಳಿಸಿದ ಬೆನ್ನಲ್ಲೇ ಹೊಸ ಮದರಸಾಗಳಿಗೆ ಅನುದಾನ ನೀಡುವುದನ್ನು ನಿಲ್ಲಿಸಲು ಉತ್ತರ ಪ್ರದೇಶದ ಸರ್ಕಾರ ನಿರ್ಧರಿಸಿದೆ. ಕಳೆದ ಬಜೆಟ್‌ನಲ್ಲಿ ಯೋಗಿ ಸರ್ಕಾರವು ಮದರಸಾಗಳನ್ನು ಆಧುನೀಕರಣಗೊಳಿಸಲು 479 ಕೋಟಿ ರು. ಅನುದಾನವನ್ನು ಹಂಚಿಕೆಮಾಡಿತ್ತು. ರಾಜ್ಯದ ಸುಮಾರು 16,000 ಮದರಸಾಗಳು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ನೋಂದಣಿ ಮಾಡಿಕೊಂಡಿದ್ದವು. ಆದರೆ ಈ ವರ್ಷ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಕ್ಯಾಬಿನೆಟ್‌ ಅನುದಾನಗಳ ಪಟ್ಟಿಯಿಂದ ಹೊಸ ಮದರಸಾಗಳನ್ನು ಹೊರಗಿರಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!