July 29, 2026
Wednesday, July 29, 2026
spot_img

ಕಲ್ಲಿದ್ದಲು ಪ್ರಕರಣ | CBI ಕ್ಲೋಸರ್ ವರದಿಗೆ ಸುಪ್ರೀಂ ಮನ್ನಣೆ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ಗೆ ಕ್ಲೀನ್ ಚಿಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠ, ಸಿಬಿಐ ತನಿಖೆಯ ಬಳಿಕ ಸಲ್ಲಿಸಿದ್ದ ಕ್ಲೋಸರ್ ವರದಿಯನ್ನು ತಿರಸ್ಕರಿಸಲು ಅಥವಾ ಪ್ರಕರಣದಲ್ಲಿ ಆರೋಪ ಸ್ವೀಕರಿಸಲು ಸಮರ್ಪಕ ಕಾರಣಗಳಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯದ ಹಿಂದಿನ ಆದೇಶಗಳನ್ನು ರದ್ದುಪಡಿಸಿ ಪ್ರಕರಣವನ್ನು ಮುಚ್ಚಿದೆ.

2015ರ ಸಮನ್ಸ್ ಆದೇಶ ರದ್ದು

2015ರಲ್ಲಿ ವಿಶೇಷ ನ್ಯಾಯಾಲಯ ಡಾ. ಮನಮೋಹನ್ ಸಿಂಗ್ ಅವರಿಗೆ ಸಮನ್ಸ್ ಜಾರಿಗೊಳಿಸಿತ್ತು. ಆ ಆದೇಶಕ್ಕೆ ಸುಪ್ರೀಂ ಕೋರ್ಟ್ ಆಗಲೇ ತಡೆ ನೀಡಿತ್ತು. ಇದೀಗ ಅಂತಿಮ ತೀರ್ಪು ನೀಡಿರುವ ನ್ಯಾಯಾಲಯ, ಕಲ್ಲಿದ್ದಲು ಗಣಿ ಹಂಚಿಕೆ ನಿರ್ಧಾರ ಆಡಳಿತಾತ್ಮಕ ಪ್ರಕ್ರಿಯೆಯ ಭಾಗವಾಗಿತ್ತು ಎಂಬ ವಾದವನ್ನು ಪರಿಗಣಿಸಿದೆ.

ಇದನ್ನೂ ಓದಿ:

18 ತಿಂಗಳ ಬಳಿಕ ಮಹತ್ವದ ತೀರ್ಪು

2024ರ ಡಿಸೆಂಬರ್‌ನಲ್ಲಿ ಡಾ. ಮನಮೋಹನ್ ಸಿಂಗ್ ನಿಧನರಾದ ಬಳಿಕ ಈ ಪ್ರಕರಣದ ವಿಚಾರಣೆ ಮುಂದುವರಿದಿತ್ತು. ಹಿರಿಯ ವಕೀಲ ಕಪಿಲ್ ಸಿಬಲ್, ಮನಮೋಹನ್ ಸಿಂಗ್ ವಿರುದ್ಧದ ಪ್ರತಿಕೂಲ ಟಿಪ್ಪಣಿಗಳನ್ನು ಕೈಬಿಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅಂತಿಮವಾಗಿ ಸುಪ್ರೀಂ ಕೋರ್ಟ್ ಸಿಬಿಐ ವರದಿಯನ್ನು ಅಂಗೀಕರಿಸಿ ಪ್ರಕರಣಕ್ಕೆ ತೆರೆ ಎಳೆದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !