Friday, March 1, 2024

ಕರಾವಳಿ ಭಾಗದ ಕನಸು ನನಸು: ವಂದೇ ಭಾರತ್ ಸಂಚಾರ ಆರಂಭ

ಹೊಸದಿಗಂತ ವರದಿ ಮಂಗಳೂರು:

ಕರಾವಳಿಗರ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಕನಸು ಕೈಗೂಡಿದೆ.
ಶನಿವಾರ ಸೆಂಟ್ರಲ್ ರೈಲು ನಿಲ್ದಾಣ ದಿಂದ ಮಡಗಾಂವ್ ಗೆ ವಂದೇ ಭಾರತ್ ಪ್ರಯಾಣ ಶನಿವಾರ ಆರಂಭಿಸಿತು.

ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರು – ಮಡಗಾಂವ್ ಸೇರಿ 6 ವಂದೇ ಭಾರತ್ ಹಾಗೂ 2 ಅಮೃತ್ ಭಾರತ್ ರೈಲುಗಳಿಗೆ ಏಕ ಕಾಲದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಹಸಿರು ನಿಶಾನೆ ತೋರಿದರು.

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಆಯೋಜಿಸಲಾದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಂಸದ ನಳಿನ್ ಕುಮಾರ್ ಮಾತನಾಡಿ , ದೇಶದಲ್ಲಿ 2014 ರ ಬಳಿಕ ಪರಿವರ್ತನೆ ಯುಗ ಆರಂಭವಾಗಿದೆ. ರೈಲ್ವೆ ಇಲಾಖೆಯಲ್ಲಿ ಅದ್ಭುತ ಪರಿವರ್ತನೆ , ಆಮೂಲಾಗ್ರ ಬದಲಾವಣೆ ಆಗಿದೆ ಎಂದರು.

ಶಾಸಕ ವೇದವ್ಯಾಸ ಕಾಮತ್, 35 ವರ್ಷಗಳಲ್ಲಿ ಹೊಸ ಫ್ಲಾಟ್ ಫಾರ್ಮ್ ಆಗಿರಲಿಲ್ಲ. ಇದೀಗ 4 ಮತ್ತು 5 ಫ್ಲ್ಯಾಟ್ ಫಾರ್ಮ್ ಆಗಿದೆ. ಇದು ಅಭೂತಪೂರ್ವ ಅಭಿವೃದ್ಧಿ ಎಂದು ಹೇಳಿದರು. ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಶಾಸಕ ಡಾ. ಭಾರತ್ ಶೆಟ್ಟಿ, ಉಪ ಮೇಯರ್ ಸುನೀತಾ, ಮನಪಾ ಸದಸ್ಯ ವಿನಯ್ ರಾಜ್, ಪಾಲ್ಫಾಟ್ ರೈಲ್ವೆಯ ಡಿಆರ್ಎಂ ಅರುಣ್ ಕುಮಾರ್ ಚತುರ್ವೇದಿ, ಎಡಿಆರ್ ಎಂ ಜಯಕೃಷ್ಣನ್ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!