September 28, 2026
Monday, September 28, 2026
spot_img

ಕರಾವಳಿ ಸ್ಪೆಷಲ್ ಅಡುಗೆ: ಹೋಟೆಲ್ ರುಚಿಯನ್ನೂ ಮರೆಸುವ ಕಾಯಿರಸ ಸಾಂಬಾರ್ ಮಾಡುವ ವಿಧಾನ

ದಕ್ಷಿಣ ಭಾರತದಲ್ಲಿ ಸಾಂಬಾರ್ ಮಾಡುವ ವಿಧಾನಗಳು ಹಲವಿದ್ದರೂ, ಕರಾವಳಿ ಕರ್ನಾಟಕ ಅಥವಾ ಮಂಗಳೂರು ಶೈಲಿಯ ಸಾಂಬಾರ್‌ಗೆ ತನ್ನದೇ ಆದ ವಿಶಿಷ್ಟ ಸ್ಥಾನವಿದೆ. ಇಲ್ಲಿ ಸಾಂಬಾರ್ ಪುಡಿಯನ್ನು ಬಳಸುವ ಬದಲು, ತಾಜಾ ತೆಂಗಿನಕಾಯಿ ಮತ್ತು ಮಸಾಲೆಗಳನ್ನು ಹದವಾಗಿ ಹುರಿದು, ಅರೆದು ‘ಕಾಯಿರಸ’ ಸಿದ್ಧಪಡಿಸಲಾಗುತ್ತದೆ. ಬಿಸಿಬಿಸಿ ಅನ್ನದೊಂದಿಗೆ ಈ ಸಾಂಬಾರ್ ಮತ್ತು ಒಂದು ಚಮಚ ತುಪ್ಪ ಸೇರಿಸಿದರೆ ಅದ್ಭುತ ರುಚಿ ನೀಡುತ್ತದೆ.

ಬೇಕಾಗುವ ಸಾಮಗ್ರಿಗಳು
ಬೂದುಗುಂಬಳಕಾಯಿ ಅಥವಾ ತರಕಾರಿಗಳು
ತೊಗರಿ ಬೇಳೆ
ಹುಣಸೆಹಣ್ಣು
ಬೆಲ್ಲ
ಉಪ್ಪು
ಕೊತ್ತಂಬರಿ ಸೊಪ್ಪು
ತೆಂಗಿನಕಾಯಿ ತುರಿ
ಒಣ ಮೆಣಸಿನಕಾಯಿ
ಕೊತ್ತಂಬರಿ ಬೀಜ
ಜೀರಿಗೆ
ಮೆಂತ್ಯ ಕಾಳು
ಸಾಸಿವೆ
ಕರಿಬೇವು
ಅರಿಶಿನ ಪುಡಿ
ಎಣ್ಣೆ
ಕೊಬ್ಬರಿ ಎಣ್ಣೆ ಅಥವಾ ತುಪ್ಪ
ಇಂಗು

ಮಾಡುವ ವಿಧಾನ
ಮೊದಲು ತೊಗರಿ ಬೇಳೆಯನ್ನು ತೊಳೆದು ಕುಕ್ಕರ್‌ನಲ್ಲಿ ಮೃದುವಾಗಿ ಬೇಯಿಸಿ, ಚೆನ್ನಾಗಿ ಮ್ಯಾಶ್ ಮಾಡಿ ಇಟ್ಟುಕೊಳ್ಳಬೇಕು. ನಂತರ ಒಂದು ಪಾತ್ರೆಯಲ್ಲಿ ಹೆಚ್ಚಿದ ಬೂದುಗುಂಬಳಕಾಯಿ ಚೂರುಗಳು, ಹುಣಸೆಹಣ್ಣಿನ ರಸ, ಬೆಲ್ಲ, ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ತರಕಾರಿ ಮೃದುವಾಗುವವರೆಗೆ ಬೇಯಲು ಬಿಟ್ಟು. ಬಳಿಕ ಒಂದು ಸಣ್ಣ ಬಾಣಲೆಯಲ್ಲಿ 1 ಚಮಚ ಎಣ್ಣೆ, ಕೊತ್ತಂಬರಿ ಬೀಜ, ಜೀರಿಗೆ, ಮೆಂತ್ಯ, ಸಾಸಿವೆ, ಕರಿಬೇವು ಮತ್ತು ಒಣ ಮೆಣಸಿನಕಾಯಿಗಳನ್ನು ಹಾಕಿ ಸಣ್ಣ ಉರಿಯಲ್ಲಿ ಹುರಿದು. ನಂತರ ಮಿಕ್ಸಿ ಜಾರ್‌ಗೆ ತೆಂಗಿನಕಾಯಿ ತುರಿ, ಅರಿಶಿನ ಪುಡಿ ಮತ್ತು ಹುರಿದ ಮಸಾಲೆಗಳನ್ನು ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು.

ಈಗ ಬೆಂದಿರುವ ತರಕಾರಿ ಪಾತ್ರೆಗೆ ಮುಂಚಿತವಾಗಿ ಬೇಯಿಸಿದ ಬೇಳೆ ಮತ್ತು ರುಬ್ಬಿದ ಕಾಯಿರಸ ಮಸಾಲೆಯನ್ನು ಸುರಿದು. ಸಾಂಬಾರ್ ಹದಕ್ಕೆ ತಕ್ಕಂತೆ ನೀರನ್ನು ಹಾಕಿ, ಇದರಿಂದ ಮಸಾಲೆಯು ಬೇಳೆ ಮತ್ತು ತರಕಾರಿಯೊಂದಿಗೆ ಸಂಪೂರ್ಣವಾಗಿ ಬೆರೆಯುತ್ತದೆ. ಕೊನೆಯದಾಗಿ, ಒಗ್ಗರಣೆ ಪಾತ್ರೆಯಲ್ಲಿ ಕೊಬ್ಬರಿ ಎಣ್ಣೆಅಥವಾ ತುಪ್ಪವನ್ನು ಬಿಸಿ ಮಾಡಿ. ಸಾಸಿವೆ, ಒಣ ಮೆಣಸಿನಕಾಯಿ, ಕರಿಬೇವು ಮತ್ತು ಇಂಗು ಹಾಕಿ, ಕುದಿಯುತ್ತಿರುವ ಸಾಂಬಾರ್‌ಗೆ ಸೇರಿಸಿ ತಕ್ಷಣ ಮುಚ್ಚಳ ಮುಚ್ಚಿ. ಮೇಲಿನಿಂದ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ಘಮಘಮಿಸುವ ಕಾಯಿರಸ ಸಾಂಬಾರ್ ಸವಿಯಲು ಸಿದ್ಧವಾಗುತ್ತದೆ.

Must Read