ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಳನೀರು, ತೆಂಗಿನಕಾಯಿ, ದುಬಾರಿಯಾಗುತ್ತಿದಂತೆ, ತೆಂಗಿನ ಕಾಯಿ ಚಿಪ್ಪಿಗೂ ಶುಕ್ರದೆಸೆ ಶುರುವಾದಂತಿದೆ. ಹೌದು! ತೆಂಗಿನ ಕಾಯಿ ಚಿಪ್ಪು ದಾಖಲೆ ಬೆಲೆಯಲ್ಲಿ ಮಾರಾಟವಾಗುತ್ತಿದೆ.
ಹಿಂದಿನ ವರ್ಷಗಳಲ್ಲಿ ಟನ್‌ಗೆ ₹7 ಸಾವಿರದಿಂದ ₹8 ಸಾವಿರದವರೆಗೂ ರೇಟ್ ಇತ್ತು. ಎರಡು ವರ್ಷದ ಹಿಂದೆ ಒಂದು ಟನ್ ₹18 ಸಾವಿರಕ್ಕೆ ಹೆಚ್ಚಳವಾಗಿತ್ತು. ಇದು ಈವರೆಗಿನ ದಾಖಲೆಯಾಗಿತ್ತು. ಆದರೆ, ಈ ಬಾರಿ ಅ ದಾಖಲೆಯನ್ನು ಸಹ ಮುರಿದಿದೆ.
ಇತ್ತೀಚಿನ ದಿನಗಳಲ್ಲಿ ಉತ್ತಮ ಬೆಲೆ ಸಿಗುತ್ತಿರುವುದರಿಂದ ರೈತರು ತೆಂಗಿನ ಕಾಯಿ, ಎಳನೀರು ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ಕೊಬ್ಬರಿ ಉತ್ಪಾದನೆ ಕಡಿಮೆಯಾಗಿದ್ದು, ಚಿಪ್ಪಿನ ಕೊರತೆ ಎದುರಾಗಿದೆ. ಹೀಗಾಗಿ ಈ ಬಾರಿ ಒಂದು ಟನ್ ಚಿಪ್ಪು ₹26,500ರ ವರೆಗೂ ಮಾರಾಟವಾಗುತ್ತಿದೆ.