VIP ವಾಹನಗಳ ಸೈರೆನ್‌ಗೆ ಕೊಕ್: ಇನ್ನು ಕೇಳಲಿದೆ ಅಂತೆ ಕೊಳಲು, ತಬಲಾ, ಸಂಗೀತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Union Minister of Road Transport and Highways Nitin Gadkari) ಅವರು ದೇಶದಲ್ಲಿ ಹೊಸತನವನ್ನು ಪರಿಚಯಿಸುತ್ತಾ ಇರುತ್ತಾರೆ.

ಇದೀಗ ಶಬ್ದ ಮಾಲಿನ್ಯಕ್ಕೆ (Sound pollution) ಕಡಿವಾಣ ಹಾಕಲು ವಿಐಪಿ ವಾಹನಗಳ (VIP Vehicles) ಮೇಲೆ ಇರುವ ಸೈರೆನ್‌ಗೆ ಕೊಕ್ ನೀಡಲು ಮುಂದಾಗಿದ್ದಾರೆ.

ಹೌದು,ವಿಐಪಿ ಕಾರುಗಳ ಮೇಲಿನ ಕೆಂಪು ದೀಪ(Red Light Beacon)ಕ್ಕೆ ಮುಕ್ತಿ ಹಾಡುವ ಭಾಗ್ಯ ನನ್ನದಾಗಿತ್ತು. ಈಗ ನಾನು ವಿಐಪಿ ಕಾರುಗಳ ಮೇಲಿನ ಸೈರೆನ್‌ಗೂ ಮಂಗಳ ಹಾಡಲು ಯೋಜನೆ ಮಾಡುತ್ತಿದ್ದೇನೆ ಎಂದು ನಿತಿನ್ ಗಡ್ಕರಿ ಅವರು ಹೇಳಿದ್ದಾರೆ.

ಸೈರೆನ್‌ಗೆ ಜೊತೆಗೆ ಕರ್ಕಶ ಹಾರ್ನ್‌ಗಳಿಗೂ ಗೇಟ್ ಪಾಸ್ ಕೊಡಲು ಹೊರಟಿದ್ದು, ಇದರ ಬದಲಿಗೆ ಭಾರತೀಯ ಶಾಸ್ತ್ರೀಯ ಸಂಗಿತ ಉಪಕರಣಗಳ ಧ್ವನಿಗಳನ್ನು ಪರಿಚಯಿಸಲು ಕೇಂದ್ರ ಸರ್ಕಾರ ಮುಂದಾಗಲಿದೆ.

ನಾನು ಸೈರನ್ ಶಬ್ದವನ್ನು ಕೊಳಲು, ತಬಲಾ ಮತ್ತು ಶಂಖ ಸಂಗೀತಕ್ಕೆ ಬದಲಾಯಿಸುವ ನೀತಿಯನ್ನು ಮಾಡುತ್ತಿದ್ದೇನೆ. ಜನರು ಶಬ್ದ ಮಾಲಿನ್ಯದಿಂದ ಮುಕ್ತರಾಗಬೇಕೆಂದು ನಾನು ಬಯಸುತ್ತೇನೆ ಎಂದು ನಿತಿನ್ ಗಡ್ಕರಿ ಅವರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!