ಸಾಮಾಗ್ರಿಗಳು
ಕರಿಮೆಣಸು
ಜೀರಿಗೆ
ಬೆಲ್ಲ
ಉಪ್ಪು
ಇಂಗು
ಎಣ್ಣೆ
ಕರಿಬೇವಿನೆಲೆ
ಕಾಳು ಮೆಣಸು, ಜೀರಿಗೆಯನ್ನು ಬಿಸಿ ಮಾಡಿ ನಂತರ ಪುಡಿ ಮಾಡಿಕೊಳ್ಳಿ.
ಒಂದು ಪಾತ್ರೆಯಲ್ಲಿ ನಾಲ್ಕು ಲೋಟ ನೀರು ಬಿಸಿಗಿಡಿ.
ಚೆನ್ನಾಗಿ ಕುದಿಯುತ್ತಿದ್ದಂತೆಯೇ ಹುಡಿಯನ್ನು ಹಾಕಿ.
ಬೆಲ್ಲ, ಉಪ್ಪು ಸೇರಿಸಿ ಕುದಿಸಿ.
ಚೆನ್ನಾಗಿ ಕುದ್ದು ಪರಿಮಳ ಬರುತ್ತಿದ್ದಂತೆಯೇ ಬೇವಿನೆಲೆಯ ಒಗ್ಗರಣೆ ನೀಡಿ.
ರುಚಿ ರುಚಿಯಾದ ಖಾರ ಖಾರವಾದ ಕರಿಮೆಣಸಿನ ಸಾರು ರೆಡಿ!