ಹೊಸದಿಗಂತ ವರದಿ, ಮಂಗಳೂರು:
ಕೋವಿಡ್ ಆತಂಕದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಈಗ ಕೋವಿಡ್ ಮಾದರಿದ್ದೇ ಲಕ್ಷಣಗಳನ್ನು ಹೊಂದಿರುವ ಶೀತ, ಜ್ವರ ಎಲ್ಲೆಡೆ ಹೆಚ್ಚಳವಾಗುತ್ತಿರುವುದು ಹೊಸ ಆತಂಕಕ್ಕೆ ಕಾರಣವಾಗಿದೆ.
ಕೋವಿಡ್ಡಾ? ಸಾಮಾನ್ಯ ಜ್ವರವಾ?
ಸಾಮಾನ್ಯವಾಗಿ ಡಿಸೆಂಬರ್ ತಿಂಗಳಿನ ಚಳಿಯ ಜೊತೆಗೆ ವೈರಾಣು ಸಂಬಂಧಿ ಜ್ವರ, ಶೀತಗಳು ಕಾಡುತ್ತವೆಯಾದರೂ, ಈ ಬಾರಿ ಕೋವಿಡ್ ಆತಂಕ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಇಷ್ಟಕ್ಕೂ ದೇಹಕ್ಕೆ ಬಾಧಿಸುತ್ತಿರುವುದು ಏನು ಎಂಬುದು ಅರಿಯದೆ ಜನತೆ ಗೊಂದಲಕ್ಕೊಳಗಾಗುತ್ತಿದ್ದಾರೆ.
ಶೀತ, ಕೆಮ್ಮು, ಜ್ವರಗಳು ಕೋವಿಡ್ ರೂಪಾಂತರಿ ಜೆಎನ್.1ನ ಲಕ್ಷಣಗಳಾಗಿದ್ದರೆ ಇದೇ ಲಕ್ಷಣಗಳು ಇನ್‌ಫ್ಲುಯೆಂಝಾ ಲೈಕ್ ಇಲ್ನೆಸ್, ಸೀವಿಯರ್ ಅಕ್ಯೂಟ್ ರೆಸ್ಪಿರೇಟರಿ ಇಲ್ನೆಸ್‌ನಲ್ಲಿ ಕೂಡಾ ಕಾಣಿಸಿಕೊಳ್ಳುತ್ತವೆ. ಹೀಗಾಗಿ ಕಾಡುತ್ತಿರುವುದು ಯಾವ ರೋಗದ ಲಕ್ಷಣ ಎಂಬುದು ಅರಿಯದೆ ಜನತೆ ಗೊಂದಲಕ್ಕೊಳಗಾಗಿದ್ದಾರೆ.