Monday, March 4, 2024

ತನ್ನ ಗುರಿ ಸಾಧಿಸುವವರೆಗೆ ಯುದ್ಧವು ಕೊನೆಗೊಳ್ಳುವುದಿಲ್ಲ: ಇಸ್ರೇಲ್ ಪ್ರಧಾನಿ ನೆತನ್ಯಾಹು

ಹೊಸದಿಗಂತ ಡಿಜಿಟಲ್ ಡೆಸ್ಕ್:

ತನ್ನ ಎಲ್ಲಾ ಗುರಿಗಳನ್ನು ಸಾಧಿಸುವವರೆಗೆ, ಹಮಾಸ್ ನಾಶದವರೆಗೆ ಗಾಜಾದಲ್ಲಿನ ಯುದ್ಧವು ಕೊನೆಗೊಳ್ಳುವುದಿಲ್ಲ ಎಂದು ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಘೋಷಿಸಿದ್ದಾರೆ.

ಹಮಾಸ್ ನಾಶಗೊಳಿಸಿ, ಒತ್ತೆಯಾಳುಗಳನ್ನು ಮರಳಿ ಕರೆತರಲು ಹಾಗೂ ಗಾಜಾ ಎಂದಿಗೂ ಇಸ್ರೇಲ್ಗೆ ಬೆದರಿಕೆಯಾಗದಂತೆ ನೋಡಿಕೊಳ್ಳಲು ಇಸ್ರೇಲ್ ರಕ್ಷಣಾ ಪಡೆಗೆ ಸರ್ಕಾರ ನಿರ್ದೇಶಿಸಿದೆ. ನಮ್ಮ ಗುರಿ ಸಾಧಿಸುವವರೆಗೂ ಯುದ್ಧ ನಿಲ್ಲಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಹಮಾಸ್ಗೆ ಯಾವುದೇ ವಿನಾಯಿತಿ ನೀಡುವುದಿಲ್ಲ. ದಕ್ಷಿಣ ಮತ್ತು ಉತ್ತರ ಎರಡರಲ್ಲೂ ಭದ್ರತೆಯನ್ನು ಪುನಃಸ್ಥಾಪಿಸುವವರೆಗೆ ಹೋರಾಡುತ್ತೇವೆ. ಅಲ್ಲಿಯವರೆಗೆ, ಎಲ್ಲವನ್ನೂ ಬದಿಗಿಡಬೇಕು ಮತ್ತು ಸಂಪೂರ್ಣ ವಿಜಯ ಸಾಧಿಸುವವರೆಗೂ ಸೇನೆಯೊಂದಿಗೆ ನಾವು ಮುಂದುವರೆಯಬೇಕು ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!