ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಹರಿ ಬುದ್ಧ ನಗರದಲ್ಲಿ ಭಾನುವಾರ ಭಾರತೀಯ ಸೇನೆಯು (Indian Army) ಮತ್ತು ಜಮ್ಮು ಮತ್ತು ಕಾಶ್ಮೀರ ಪೋಲಿಸರು (Jammu Kashmir Police) ಜಂಟಿ ಕಾರ್ಯಾಚರಣೆ ನಡೆಸಿ ಉಗ್ರರ ಕೃತ್ಯಕ್ಕೆ ಸಹಕಾರ ನೀಡುತ್ತಿದ್ದ ಸ್ಕೂಲ್ ಹೆಡ್ ಮಾಸ್ತರ್ನನ್ನು (Head Master) ಬಂಧಿಸಿದೆ.
ಖಮರುದ್ದೀನ್ ಬಂಧಿತ ಹೆಡ್ಮಾಸ್ತರ್. ಈತನ ಮನೆಯಲ್ಲಿ ಪಾಕಿಸ್ತಾನ ನಿರ್ಮಿತ ಪಿಸ್ತೂಲ್ ಮತ್ತು ಚೀನಾದ ಗ್ರೆನೇಡ್ಗಳು ಸಿಕ್ಕಿದ್ದು ವಶಪಡಿಸಿಕೊಳ್ಳಲಾಗಿದೆ.
ಪೂಂಚ್ ಪ್ರದೇಶದಲ್ಲಿ ಲೋಕಸಭಾ ಚುನಾವಣೆ ವೇಳೆ ಹಿಂಸಾಚಾರ ನಡೆಸಲು ಗ್ರೆನೇಡ್ ಸಂಗ್ರಹಿಸಿಡಲಾಗಿತ್ತು ಎಂದು ವರದಿಯಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ 5 ಲೋಕಸಭಾ ಕ್ಷೇತ್ರಗಳಿಗೆ 5 ಹಂತದಲ್ಲಿ ಚುನಾವಣೆ ನಡೆಯಲಿದೆ. ಉದಂಪುರ್ನಲ್ಲಿ ಏ.19 ರಂದು ನಡೆದಿದ್ದರೆ ಏ.26 ರಂದು ಜಮ್ಮು, ಮೇ 7 ರಂದು ಅನಂತನಾಗ್-ರಾಜೌರಿ, ಮೇ 13 ರಂದು ಶ್ರೀನಗರ, ಮೇ 20 ರಂದು ಬಾರಾಮುಲ್ಲಾದಲ್ಲಿ ಚುನಾವಣೆ ನಡೆಯಲಿದೆ.