ಹೊಸದಿಗಂತ ವರದಿ, ಹುಬ್ಬಳ್ಳಿ
ಹಳೆ ಹುಬ್ಬಳ್ಳಿ ಇಂಡಿ ಪಂಪ ಹತ್ತಿರ ನಡೆದ ಕಲ್ಲು ತೂರಾಟ ಘಟನೆ ಸಂಬಂಧಿಸಿದಂತೆ 6 ಪ್ರಕರಣಗಳನ್ನು ದಾಖಲಾಗಿದ್ದು, 40 ದುಷ್ಕರ್ಮಿಗಳನ್ನು ಬಂಧಿಸಲಾಗಿದೆ ಎಂದು ಹು-ಧಾ ಪೊಲೀಸ್ ಆಯುಕ್ತ ಲಾಭೂರಾಮ ಮಾಹಿತಿ ನೀಲಾಗಿದೆ.
ನಗರದಲ್ಲಿ ಭಾನುವಾರ ಮಾಧ್ಯಮದರಿಂದಿಗೆ ಮಾತನಾಡಿದ ಅವರು, ಪ್ರಜೋದನಾ ಕಾರಿ ಪೋಸ್ಟ್ ಮಾಡಿದ್ದರಿಂದ ನೂರಾರು ಜನರು ಶನಿವಾರ ತಡ ರಾತ್ರಿ ಹಳೆ ಹುಬ್ಬಳ್ಳಿ ವೃತ್ತದಲ್ಲಿ ಜಮಾವಣೆಗೊಂಡರು. ನಂತರ ಪೊಲೀಸ್ ಪರಿಸ್ಥಿತಿಗೊಳಿಸಲು ಮುಂದಾದಾಗ ಏಕಾಏಕಿ ಕಲ್ಲು ತೂರಾಟ ಮಾಡಿ ಹಲ್ಲೆ ಮಾಡಿದ್ದಾರೆ. ಇದರಲ್ಲಿ ಪೊಲೀಸರು ಸೇರಿದಂತೆ 12 ಜನರಿಗೆ ಗಾಯಗಾಳಾಗಿವೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಈಗಾಗಲೇ ಈ ಕೃತ್ಯಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ. ಸಾರ್ವಜನಿಕರಿಗೆ ತೊಂದರೆ ಈ ಗಾಲಾಟೆಯಿಂದ ತೊಂದರೆಯಾಗಿದ್ದರೆ ತಕ್ಷಣ ಪೊಲೀಸ್ ಠಾಣೆಗೆ ಬಂಧು ದೂರು ನೀಡಿದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ದೃಶ್ಯ ಕೃತ್ಯ ನಡೆಸಿದ ಕಿಡಿಗೆಡಿಗಳನ್ನು ವಶಪಡಿಸಿಕೊಂಡಿದ್ದರಿಂದ ಅವರ ಕುಟುಂಬದವರು ಠಾಣೆ ಎದರು ಬಂದು ಕಣ್ಣಿರು ಹಾಕುತ್ತಾ ಬಿಡುವಂತೆ ಮನವಿ ಮಾಡಿದರು.
ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಭೇಟಿ ನೀಡಿ ರಾತ್ರಿಯಾದ ಘಟನೆ ಬಗ್ಗೆ ಮಾಹಿತಿ ಪಡೆದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ