ಬುಲ್ ಫೈಟ್ ಸ್ಟೇಡಿಯಂ ಕುಸಿತ: ಕೊಲಂಬಿಯಾದಲ್ಲಿ ಆರು ಮಂದಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅದು ಕೊಲಂಬಿಯಾದ ಬುಲ್ ಫೈಟ್ ಸ್ಟೇಡಿಯಂ, ಘಟನೆ ನಡೆಯುವಷ್ಟರಲ್ಲಾಗಲೇ ಬುಲ್ ಫೈಟ್ ನೋಡುಗರನ್ನು ತುಂಬಾ ಆಕರ್ಷಿಸಿತ್ತು. ಎಲ್ಲರೂ ಚಿತ್ತ ಗೂಳಿ ಕಾಳಗದತ್ತ ನೆಟ್ಟಿತ್ತು. ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ ಬುಲ್ ಫೈಟ್ ಸ್ಟೇಡಿಯಂನ ಒಂದು ಬದಿಯ ಗ್ಯಾಲರಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ದುರಂತದಲ್ಲಿ ಆರು ಜನ ಸಾವನ್ನಪ್ಪಿದ್ದು, ಕನಿಷ್ಠ 300 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ 10 ಜನರ ಸ್ಥಿತಿ ಚಿಂತಾಜನಕವಾಗಿದೆ.

ಬೊಗೊಟ್‌ನಿಂದ ನೈಋತ್ಯಕ್ಕೆ 100 ಮೈಲುಗಳಷ್ಟು ದೂರದಲ್ಲಿರುವ ಕೊಲಂಬಿಯಾದ ಎಲ್ ಎಸ್ಪಿನಲ್‌ನಲ್ಲಿ ನಡೆದ ಗೂಳಿ ಕಾಳಗವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಭಾನುವಾರ (ಜೂನ್ 26,2022) ವಾರಾಂತ್ಯವಾಗಿದ್ದರಿಂದ ಜನಸಂದಣಿ ಕೂಡ ಹೆಚ್ಚಾಗಿತ್ತು. ಸಂಜೆ ಗೂಳಿ ಕಾಳಗ ನಡೆಯುತ್ತಿದ್ದ ವೇಳೆಯೇ ಏಕಾಏಕಿ ಕ್ರೀಡಾಂಗಣ ಒಂದು ಭಾಗ ಕುಸಿದಿದೆ.

ಗಾಯಗೊಂಡವರ ಸಂಖ್ಯೆ 300ಕ್ಕೂ ಹೆಚ್ಚು ಎಂದು ಸ್ಥಳೀಯ ಅಧಿಕಾರಿಗಳು ಅಂದಾಜಿಸಿದ್ದಾರೆ. ಘಟನೆ ನಡೆದ ತಕ್ಷಣ ಸ್ಥಳಕ್ಕೆ ಆಗಮಿಸಿದ ಸಹಾಯಕ ತಂಡಗಳು ಕ್ರೀಡಾಂಗಣದ ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಣೆ ಮಾಡಿ ಸಮೀಪದ ಆಸ್ಪತ್ರೆಗಳಿಗೆ ರವಾನಿಸಿದರು. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!