ಬನ್ನಿ ಇವತ್ತು ರೋಸ್ ಶರಬತ್ ಟ್ರೈ ಮಾಡೋಣ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ನಿನ್ನೆಯ ಮ್ಯಾಂಗೋ ಜ್ಯೂಸ್ ಟ್ರೈ ಮಾಡಿದ್ರಾ? ಹೆಂಗಿತ್ತು?
ಬನ್ನಿ ಇವತ್ತು ರೋಸ್ ಶರಬತ್ ಟ್ರೈ ಮಾಡೋಣ!
ಏನ್ ಬೇಕು?
ನಿಂಬೆಹಣ್ಣು: ಎರಡು
ಸಕ್ಕರೆ: ರುಚಿಗೆ ತಕ್ಕಷ್ಟು
ನೀರು: ಎಂಟು ಲೋಟ
ಪನ್ನೀರು: ನಾಲ್ಕು ಚಮಚ
ಹೇಗೆ ಮಾಡ್ಬೇಕು?
ರಸಭರಿತ ತಾಜಾ ನಿಂಬೆಹಣ್ಣನ್ನು ಮೂರು ನಿಮಿಷಗಳ ಕಾಲ ಬಿಸಿನೀರಿನಲ್ಲಿ ಅದ್ದಿಡಿ.
ನಂತರ ಅದನ್ನು ಕತ್ತರಿಸಿ ರಸವನ್ನು ಸಂಗ್ರಹಿಸಿ.
ನಿಂಬೆಹಣ್ಣಿನ ಬೀಜಗಳಿದ್ದಲ್ಲಿ ಬೇರ್ಪಡಿಸಿ.
ಅದಕ್ಕೆ ಸಕ್ಕರೆ, ನೀರು, ಪನ್ನೀರು ಹಾಕಿ ಚೆನ್ನಾಗಿ ಕಲಕಿ.
ಬೇಕಾದಲ್ಲಿ ಏಲಕ್ಕಿ ಪುಡಿ ಸೇರಿಸಿಕೊಳ್ಳಿ. ಜ್ಯೂಸ್ ರೆಡಿ!
ಇದಕ್ಕೆ ಐಸ್‌ಕ್ಯೂಬ್ ಸೇರಿಸಿದ್ರೆ ಅದರ ಮಜಾನೇ ಬೇರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!