ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಾದಗಿರಿ ಪಿಎಸ್‌ಐ ಪರಶುರಾಮ್ ಸಾವಿಗೆ ಕಾರಣರಾದ ಯಾದಗಿರಿ ಶಾಸಕ ಮತ್ತು ಅವರ ಪುತ್ರನನ್ನು ಮೊದಲು ಬಂಧಿಸಿ ಬಳಿಕ ಗೃಹ ಸಚಿವರು ನಮ್ಮ ಮನೆಗೆ ಬರಲಿ ಎಂದು ಪರಶುರಾಮ್ ಅವರ ಸಹೋದರ ಹನುಮಂತಪ್ಪ ಛಲವಾದಿ ಒತ್ತಾಯಿಸಿದ್ದಾರೆ.
ಇನ್ನು ಘಟನೆ ನಡೆದು ಐದು ದಿನವಾದರೂ ಕೂಡ ಆರೋಪಿಗಳ ಬಂಧನವಾಗಿಲ್ಲ. ಇದು ಕುಟುಂಬದವರ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ಸಮಯದಲ್ಲಿ ನಾಳೆ(ಆ.07) ಪರಶುರಾಮ್ ನಿವಾಸಕ್ಕೆ ಗೃಹ ಸಚಿವ ಜಿ ಪರಮೇಶ್ವರ ಭೇಟಿ ನೀಡಲು ಬರುತ್ತಿದ್ದಾರೆ. ಆದ್ರೆ, ಗೃಹ ಸಚಿವರು ಗ್ರಾಮಕ್ಕೆ ಬರುವ ಮೊದಲು ಆರೋಪಿಗಳನ್ನು ಬಂಧಿಸಬೇಕು. ಆರೋಪಿಗಳನ್ನು ಬಂಧಿಸದೇ ಬರುವುದು ಬೇಡ ಎಂದು ಕುಟುಂಬದವರು ಮತ್ತು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.
ಒಂದಡೆ ಪರಶುರಾಮ್ ಸಾವಿನ ಬಗ್ಗೆ ಸಿಐಡಿ ತಂಡ ತನಿಖೆ ಆರಂಭಿಸಿದೆ. ಆದ್ರೆ, ಇನ್ನೊಂದೆಡೆ ಕುಟುಂಬದವರು ಮತ್ತು ಬಿಜೆಪಿ ನಾಯಕರು ನಿಸ್ಪಕ್ಷಪಾತವಾದ ತನಿಖೆಯಾಗಬೇಕಾದರೆ ಪ್ರಕರಣವನ್ನು ಸಿಬಿಐಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.