ವೀಕೆಂಡ್ ಗಮ್ಮತ್ತಿಗೆ ಬನ್ನಿ ಮಾರ್ರೆ ಕುಡ್ಲದ ಪಣಂಬೂರು ಬೀಚ್ ಗೆ: ತೇಲಾಡುತ್ತಾ ನೋಡಿ ಸೂರ್ಯಾಸ್ತ !

ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರು ನಗರದ ‘ಪಣಂಬೂರು ಬೀಚ್’ ಈಗ ಇನ್ನಷ್ಟು ಪ್ರವಾಸಿಗರನ್ನು ತನ್ನತ್ತ ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಇದಕ್ಕೆ ಕಾರಣ ಬುಧವಾರ ಇಲ್ಲಿ ಉದ್ಘಾಟನೆಗೊಂಡ ತೇಲುವ ಸೇತುವೆ!
ದಕ್ಷಿಣ ಕನ್ನಡದ ಮೊದಲ ತೇಲುವ ಸೇತುವೆ
ದಕ್ಷಿಣ ಕನ್ನಡದ ಮೊದಲ ಈ ತೇಲುವ ಸೇತುವೆ, ಸುಮಾರು 150 ಮೀಟರ್ ಉದ್ದ ಹೊಂದಿದೆ. ಇದರ ಇನ್ನೊಂದು ವಿಶೇಷತೆ ಎಂದರೆ ಏಕಕಾಲದಲ್ಲಿ 50ರಷ್ಟು ಪ್ರವಾಸಿಗರು ಈ ಸೇತುವೆಯ ತುದಿಯಲ್ಲಿ ನಿಂತು ಸೂರ್ಯಾಸ್ತಮಾನ ನೋಡಬಹುದು.
ಪ್ರವಾಸೋದ್ಯಮಕ್ಕೆ ಇನ್ನಷ್ಟು ಒತ್ತು
ಈ ತೇಲು ಸೇತುವೆ ಉದ್ಘಾಟಿಸಿದ ವಿಧಾನಸಭಾ ಸ್ಪೀಕರ್, ಶಾಸಕ ಯು.ಟಿ ಖಾದರ್ ಉದ್ಘಾಟಿಸಿ, ಇಲ್ಲಿನ ಬೀಚ್‌ನ ಪ್ರವಾಸೋದ್ಯಮಕ್ಕೆ ಸರಕಾರ ಎಲ್ಲ ರೀತಿಯ ಸಹಕಾರ ನೀಡುವ ಬಗ್ಗೆ ಪ್ರವಾಸೋಧ್ಯಮ ಸಚಿವರ ಜತೆ ಮಾತುಕತೆ ನಡೆಸಲಾಗುವುದು ಎಂದಿದ್ದಾರೆ. ಈ ಸಂದರ್ಭ ಬೀಚ್ ನಿರ್ವಹಣಾ ಸಂಸ್ಥೆಯ ಪಾಲುದಾರರಾದ ಲಕ್ಷ್ಮೀಶ್ ಭಂಡಾರಿ,ರಾಜೇಶ್ ಹುಕ್ಕೇರಿ ಉಪಸ್ಥಿತರಿದ್ದರು.
ತೇಲುವ ಸೇತುವೆ ಉದ್ಘಾಟನೆ ದಿನ ಬೃಹತ್ ಅಲೆಯ ನಡುವೆ ಸೇತುವೆಯಲ್ಲಿ ಪ್ರವಾಸಿಗರು ನಡೆದಾಡಿ ಸಂಭ್ರಮಿಸಿದರು. ಉಡುಪಿ ಜಿಲ್ಲೆಯ ಮಲ್ಪೆ ಬೀಚ್ ಬಳಿಕ ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಬೀಚ್‌ನಲ್ಲಿ ಮೊದಲ ತೇಲುವ ಸೇತುವೆ ಇದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!