ತಪ್ಪದೇ ಮದುವೆಗೆ ಬನ್ನಿ… ಸಿನಿಮಾ, ರಾಜಕೀಯದ ಗಣ್ಯರಿಗೆ ಆಮಂತ್ರಣ ಪತ್ರ ನೀಡಿದ ತರುಣ್‌ ಸುಧೀರ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಸ್ಯಾಂಡಲ್​ವುಡ್​ ನಿರ್ದೇಶಕ ತರುಣ್​ ಸುಧೀರ್​ ,ನಟಿ ಸೋನಲ್‌ ಮೊಂತೆರೋ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ‌ಆಗಸ್ಟ್ 10ರಂದು ಈ ಜೋಡಿಯ ಆರತಕ್ಷತೆ ನಡೆದರೆ, 11ರ ಭಾನುವಾರ ಬೆಳಗ್ಗೆ 10;50 ರಿಂದ 11;35ರ ಒಳಗೆ ಸಲ್ಲುವ ಶುಭ ಲಗ್ನದಲ್ಲಿ ತರುಣ್ ಮತ್ತು ಸೋನಾಲ್ ಸಪ್ತಪದಿ ತುಳಿಯಲಿದ್ದಾರೆ.

ಹೀಗಾಗಿ ಆಪ್ತರಿಗೆ ಲಗ್ನ ಪತ್ರಿಕೆ ಕೊಡುವ ಕೆಲಸದಲ್ಲಿ ತರುಣ್ ಬಿಜಿಯಾಗಿದ್ದಾರೆ.

ಕಿಚ್ಚ ಸುದೀಪ್ ಅವರನ್ನು ಭೇಟಿಯಾಗಿ ತರುಣ್ ಸುಧೀರ್​ ಅವರು ಮದುವೆಯ ಆಮಂತ್ರಣ ನೀಡಿದ್ದಾರೆ. ಅದೇ ರೀತಿ ಮಾಲಾಶ್ರೀ ಪುತ್ರಿ ಆರಾಧನಾ ರಾಮ್​ ಅವರನ್ನು ಲಾಂಚ್​ ಮಾಡಿದ್ದೇ ತರುಣ್​ ಸುಧೀರ್​. ‘ಕಾಟೇರ’ ಸಿನಿಮಾಗೆ ಆರಾಧನಾ ನಾಯಕಿಯಾಗಿ ನಟಿಸಿದರು. ಅವರಿಗೂ ವಿವಾಹದ ಆಮಂತ್ರಣ ನೀಡಲಾಗಿದೆ. ಈ ವೇಳೆ ಮಾಲಾಶ್ರೀ ಕೂಡ ಜೊತೆಗಿದ್ದರು.

ಕಿಚ್ಚ ಸುದೀಪ್‌ ಮನೆಗೆ ತೆರಳಿ ಮದುವೆ ಲಗ್ನ ಪತ್ರಿಕೆ ನೀಡಿದ ತರುಣ್‌ ಸುಧೀರ್‌ರಚಿತಾ ರಾಮ್​, ಉಪೇಂದ್ರ, ರಾಘವೇಂದ್ರ ರಾಜ್​ಕುಮಾರ್​ ಅವರಿಗೂ ತರುಣ್​ ಸುಧೀರ್​ ಆಹ್ವಾನ ನೀಡಿದ್ದಾರೆ. ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಅದ್ದೂರಿ ಮದುವೆಯಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗಿಯಾಗಲಿದ್ದಾರೆ.

ನಟಿ ರಚಿತಾ ರಾಮ್‌ಗೆ ಮದುವೆ ಲಗ್ನ ಪತ್ರಿಕೆ ನೀಡಿದ ತರುಣ್‌ ಸುಧೀರ್‌ಅಶ್ವಿನಿ ಪುನೀತ್​ ರಾಜ್​ಕುಮಾರ್​ , ಶಿವರಾಜ್​ಕುಮಾರ್​, ಗೀತಾ ದಂಪತಿಯನ್ನು ಭೇಟಿಯಾಗಿ ತರುಣ್​ ಆಹ್ವಾನ ಪತ್ರಿಕೆ ನೀಡಿದ್ದಾರೆ.

ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಮದುವೆ ಲಗ್ನ ಪತ್ರಿಕೆ ನೀಡಿದ ತರುಣ್‌ ಸುಧೀರ್‌
ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ದಂಪತಿಗೆ ಮದುವೆ ಲಗ್ನ ಪತ್ರಿಕೆ ನೀಡಿದ ತರುಣ್‌ ಸುಧೀರ್‌ರಾಜಕೀಯ ಕ್ಷೇತ್ರದಲ್ಲೂ ಅನೇಕರ ಜೊತೆ ತರುಣ್​ ಸುಧೀರ್​ ಅವರು ಆತ್ಮೀಯತೆ ಹೊಂದಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಸೇರಿದಂತೆ ಅನೇಕರು ಈ ಮದುವೆಗೆ ಬರುವ ನಿರೀಕ್ಷೆ ಇದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತರುಣ್​ ಸುಧೀರ್​ ಅವರು ಆಹ್ವಾನಿಸಿ ಬಂದಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರಿಗೆ ಮದುವೆ ಲಗ್ನ ಪತ್ರಿಕೆ ನೀಡಿದ ತರುಣ್‌ ಸುಧೀರ್‌ 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!