ವಿನೇಶ್ ಫೋಗಟ್ ಗೆ ಫೈನಲ್ ಆಡಲು ಅವಕಾಶವಿದೆಯೇ?: ಅಂತಾರಾಷ್ಟ್ರೀಯ ಕುಸ್ತಿ ಫೆಡರೇಷನ್ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ವಿನೇಶ್ ಫೋಗಟ್ ಕೇವಲ 100 ಗ್ರಾಂ ಹೆಚ್ಚಿದ್ದ ಕಾರಣ 50 ಕೆ.ಜಿ ವಿಭಾದ ಕುಸ್ತಿ ಫೈನಲ್ ಪಂದ್ಯದಿಂದ ಅನರ್ಹಗೊಂಡಿದ್ದಾರೆ. ಏತನ್ಮಧ್ಯೆ, ವಿನೇಶ್ ಫೋಗಟ್ ಫೈನಲ್ ಪಂದ್ಯವನ್ನು ಆಡಲು ಇನ್ನೂ ಏನಾದರೂ ಅವಕಾಶವಿದೆಯೇ ಎಂಬ ಪ್ರಶ್ನೆ ಭಾರತದ ಕೋಟ್ಯಂತರ ಕ್ರೀಡಾಭಿಮಾನಿಗಳ ಮನಸ್ಸಿನಲ್ಲಿ ಮೂಡುತ್ತಿದೆ. ಇದೀಗ ಈ ಬಗ್ಗೆ ಅಂತಾರಾಷ್ಟ್ರೀಯ ಕುಸ್ತಿ ಫೆಡರೇಷನ್ ಸ್ಪಷ್ಟನೆ ನೀಡಿದೆ.

ಅಂತಾರಾಷ್ಟ್ರೀಯ ಕುಸ್ತಿ ಫೆಡರೇಶನ್ (ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್) ಅಧ್ಯಕ್ಷ ನೆನಾದ್ ಲಾಲೋವಿಚ್ ಅವರು, ವಿನೇಶ್ ಅನರ್ಹತೆಯ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ‘ಇದರಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ನಾವು ನಿಯಮಗಳನ್ನು ಗೌರವಿಸಬೇಕು. ವಿನೇಶ್​ಗೆ ಈ ರೀತಿ ಆಗಿರುವುದು ನನಗೆ ತುಂಬಾ ದುಃಖ ತಂದಿದೆ. ಅವರು ನಿಗದಿತ ತೂಕಕ್ಕಿಂತ ಹೆಚ್ಚು ತೂಕ ಇದ್ದರು. ಅದೇನೆ ಇದ್ದರೂ ನಿಯಮಗಳು ಮತ್ತು ವಿಧಾನವು ಸಾರ್ವಜನಿಕವಾಗಿದೆ. ನಿಯಮಬಾಹಿರವಾಗಿ ವಿನೇಶ್​ಗೆ ಫೈನಲ್ ಆಡಲು ಅವಕಾಶ ನೀಡಬೇಕೆಂದು ಜನರು ಮಾತನಾಡುತ್ತಿರುವ ರೀತಿ ಸಮಂಜಸವಲ್ಲ. ಆಟದಲ್ಲಿ ಭಾಗವಹಿಸಲು ಬರುವವರಿಗೆ ನಿಯಮಗಳ ಅರಿವಿದೆ. ಹೀಗಾಗಿ ವಿನೇಶ್​ಗೆ ಮುಂದೆಯೂ ಸಾಕಷ್ಟು ಅವಕಾಶಗಳಿವೆ. ಆದರೆ ಈ ಬಾರಿ ಜನರು ನಿರೀಕ್ಷಿಸುತ್ತಿರುವಂತೆ ಯಾವುದು ನಡೆಯುವುದಿಲ್ಲ ಎಂದಿದ್ದಾರೆ.

ಭಾರತೀಯ ಕುಸ್ತಿ ಸಂಸ್ಥೆಯ ಪ್ರತಿಕ್ರಿಯೆ ಏನು?
ವಿನೇಶ್ ಅವರನ್ನು ಅನರ್ಹಗೊಳಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ (ಯುಡಬ್ಲ್ಯುಡಬ್ಲ್ಯು) ಗೆ ಭಾರತೀಯ ಕುಸ್ತಿ ಫೆಡರೇಶನ್ ಮನವಿ ಮಾಡಿದೆ. ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​ಅಧ್ಯಕ್ಷೆ ಪಿಟಿ ಉಷಾ ಕೂಡ ತಮ್ಮ ಪ್ರತಿಕ್ರಿಯೆಯಲ್ಲಿ ಅಂತಾರಾಷ್ಟ್ರೀಯ ಕುಸ್ತಿ ಒಕ್ಕೂಟದ ಮುಂದೆ ತಮ್ಮ ಅಭಿಪ್ರಾಯಗಳನ್ನು ಬಲವಾಗಿ ಮಂಡಿಸುತ್ತಿರುವುದಾಗಿ ಹೇಳಿದ್ದಾರೆ.

 

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!