ಹೊಸದಿಗಂತ ಡಿಜಿಟಲ್ ಡೆಸ್ಕ್
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಹಾಸ್ಯನಟ ಚಿಕ್ಕಣ್ಣಗೆ ಮತ್ತೆ ಸಂಕಷ್ಟ ಎದುರಾಗಲಿದೆ. ದರ್ಶನ್ ಮತ್ತು ಗ್ಯಾಂಗ್ ವಿರುದ್ಧ ಪ್ರಮುಖ ಸಾಕ್ಷಿಗಳಲ್ಲಿ ಒಬ್ಬರಾದ ಚಿಕ್ಕಣ್ಣ ಈಗಾಗಲೇ ಅಪರಾಧ ಚಟುವಟಿಕೆಗಳ ಕಾಯ್ದೆಯ ಸೆಕ್ಷನ್ 164 ರ ಅಡಿಯಲ್ಲಿ ನ್ಯಾಯಾಧೀಶರಿಗೆ ಹೇಳಿಕೆ ನೀಡಿದ್ದಾರೆ. ಹೇಳಿಕೆಯ ನಂತರ ದರ್ಶನ್ ಅವರನ್ನು ಭೇಟಿ ಮಾಡಿದ್ದಾರೆ.
ತನಿಖೆಯ ಹಂತದಲ್ಲಿ, ಸಾಕ್ಷಿಗಳು ಸಾಮಾನ್ಯವಾಗಿ ಜೈಲಿನಲ್ಲಿ ಪ್ರತಿವಾದಿಯನ್ನು ಭೇಟಿಯಾಗುವುದಿಲ್ಲ. ಆದರೆ, ತನಿಖೆಯ ಹಂತದಲ್ಲಿ ಚಿಕ್ಕಣ್ಣ ದರ್ಶನ್ ಅವರನ್ನು ಭೇಟಿಯಾಗಿದ್ದಾರೆ ಈ ಕಾರಣಕ್ಕೆ ಎಸ್‌ಐಟಿ ಶೀಘ್ರದಲ್ಲೇ ನೋಟಿಸ್ ನೀಡುವ ಸಾಧ್ಯತೆಯಿದೆ.
ಯಾವ ಉದ್ದೇಶಕ್ಕಾಗಿ ನೀವು ಆರೋಪಿಯನ್ನು ಭೇಟಿ ಮಾಡಿದ್ದೀರಿ? ಆರೋಪಿ ಬಳಿ ಏನು ಮಾತನಾಡಿದ್ದೀರಿ ಎಂದು ಚಿಕ್ಕಣ್ಣ ಅವರನ್ನು ಪೊಲೀಸರು ಪ್ರಶ್ನಿಸುವ ಸಾಧ್ಯತೆಯಿದೆ. ಜತೆಗೆ ಜೈಲು ಅಧಿಕಾರಿಗಳಿಂದ ಕೂಡ ಮಾಹಿತಿ ಲಭ್ಯವಾಗಬಹುದು. ಸಾಕ್ಷಿಗಳ ಭೇಟಿಯನ್ನು ತಡೆಯಲು ಎಸ್‌ಐಟಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಸಾಧ್ಯತೆಯೂ ಇದೆ.