ಆಕಾಶದಲ್ಲಿ ಪವಾಡ: 50 ಸಾವಿರ ವರ್ಷಗಳ ಬಳಿಕ ಭೂಮಿ ಸಮೀಪ ಬರಲಿದೆ ಧೂಮಕೇತು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಂತರಿಕ್ಷದಲ್ಲಿ ಅದ್ಭುತ ದೃಶ್ಯವೊಂದು ತೆರೆದುಕೊಳ್ಳಲಿದೆ. 50 ಸಾವಿರ ವರ್ಷಗಳ ಹಿಂದೆ ಹಿಮಯುಗದಲ್ಲಿ ಭೂಮಿಯ ಸಮೀಪ ಬಂದಿದ್ದ ಧೂಮಕೇತು… ಮತ್ತೆ ಭೂಮಿಯ ಸಮೀಪ ಬರಲಿದೆ. ವಿಜ್ಞಾನಿಗಳ ಪ್ರಕಾರ, ಈ ಅಪರೂಪದ ಧೂಮಕೇತು ಫೆಬ್ರವರಿ 1 ಮತ್ತು 2, 2023 ರಂದು ಭೂಮಿಯ ಸಮೀಪಕ್ಕೆ ಬರಲಿದೆ. ಇದನ್ನು ನೇರವಾಗಿ ಕಣ್ಣಿನಿಂದ ನೋಡಬಹುದು. ಆಕಾಶವು ಸ್ಪಷ್ಟವಾಗಿದ್ದರೆ ಈ ಅದ್ಭುತ ದೃಶ್ಯ ಗೋಚರಿಸುತ್ತದೆ. ಇದು ಇತರ ಧೂಮಕೇತುಗಳಿಗಿಂತ ಭಿನ್ನವಾದದ್ದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಈ ಅಪರೂಪದ ಧೂಮಕೇತುವಿಗೆ C/2022 E3 (ZTF) ಎಂದು ಹೆಸರಿಡಲಾಗಿದೆ. ಫೆಬ್ರವರಿ 1 ಮತ್ತು 2 ರಂದು ಸುಮಾರು 4.20 ಕೋಟಿ ಕಿಲೋಮೀಟರ್ ದೂರದಿಂದ ಇದು ಗೋಚರಿಸುತ್ತದೆ. ಜನವರಿ 12 ರಂದು, ಸೂರ್ಯನಿಂದ ಧೂಮಕೇತುವಿನ ದೂರವು 160 ಮಿಲಿಯನ್ ಕಿಲೋಮೀಟರ್ ಆಗಿದೆ. ಫೆಬ್ರವರಿ 1 ಮತ್ತು 2 ರಂದು ಭೂಮಿಯ ಸಮೀಪ ಬರಲಿದೆ. ಅಂದರೆ.. 42 ಮಿಲಿಯನ್ ಕಿಲೋಮೀಟರ್ ದೂರ.  ಫೆಬ್ರವರಿ 10 ರಂದು ಮಂಗಳ ಗ್ರಹದ ಸಮೀಪ ಹಾದುಹೋದಾಗ ಆಕಾಶದಲ್ಲಿ ಧೂಮಕೇತುವನ್ನು ಗುರುತಿಸಲು ಮತ್ತೊಂದು ಅವಕಾಶವಿದೆ ಎಂದು ಝ್ವಿಕಿ ಟ್ರಾನ್ಸಿಯೆಂಟ್ ಫೆಸಿಲಿಟಿಯಲ್ಲಿ ಕೆಲಸ ಮಾಡುವ ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಭೌತಶಾಸ್ತ್ರದ ಪ್ರಾಧ್ಯಾಪಕ ಥಾಮಸ್ ಫ್ರಿನ್ಸ್ ಹೇಳಿದ್ದಾರೆ.

ಫೆಬ್ರವರಿ 2 ರಂದು ಭೂಮಿಗೆ ಸಮೀಪವಿರುವ ಸಮಯದಲ್ಲಿ ಧೂಮಕೇತು ರಾತ್ರಿಯಲ್ಲಿ ಗೋಚರಿಸುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!