ಹೊಸದಿಗಂತ ಡಿಜಿಟಲ್ ಡೆಸ್ಕ್:
ಗ್ರೇಟರ್ ನೋಯ್ಡಾದಲ್ಲಿ ಕಮೋಡ್ ಸ್ಫೋಟಗೊಂಡು ಯುವಕನಿಗೆ ಗಂಭೀರ ಗಾಯಗಳಾಗಿವೆ.
ಬೀಟಾ 2 ಕೊಟ್ವಾಲಿ ಪ್ರದೇಶದಲ್ಲಿ ನಡೆದಿದೆ. ಯುವಕನನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಸ್ಫೋಟಕ್ಕೆ ಕಾರಣಗಳನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ.
ಮೀಥೇನ್ ಅನಿಲದಿಂದ ಸ್ಫೋಟ ಸಂಭವಿಸಿರಬಹುದು ಎನ್ನಲಾಗಿದೆ. ಒಳಚರಂಡಿ ವ್ಯವಸ್ಥೆಯ ಅಸಮರ್ಪಕ ಕಾರ್ಯ ಇದಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ಆಶು ನಗರ್ ಎನ್ನುವವರು ಬಾಡಿಗೆಗೆ ಇದ್ದ ಬೀಟಾ 2 ಪೊಲೀಸ್ ಠಾಣೆ ಪ್ರದೇಶದ ಮನೆಯ ಶೌಚಾಲಯದ ಕಮೋಡ್ ಒಡೆದು ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಕೂಡಲೇ ಮನೆಯವರು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಯುವಕನ ಸಂಬಂಧಿಕರು ಮೀಥೇನ್ ಅನಿಲ ಸ್ಫೋಟದಿಂದ ಅಪಘಾತ ಸಂಭವಿಸಿರುವ ಸಾಧ್ಯತೆಯನ್ನು ವ್ಯಕ್ತಪಡಿಸಿದ್ದಾರೆ. ಪೊಲೀಸರು ಅದನ್ನು ನಿರಾಕರಿಸಿದ್ದಾರೆ. ಸೆಕ್ಟರ್ -36 ರಲ್ಲಿರುವ ಮನೆ ಸಂಖ್ಯೆ ಸಿ -364 ಸುನಿಲ್ ಪ್ರಧಾನ್ ಅವರಿಗೆ ಸೇರಿದೆ.
ಫ್ಲಶ್ ಆನ್ ಮಾಡಿದ ತಕ್ಷಣ ಸ್ಫೋಟಗೊಂಡಿತು, ಬಳಿಕ ಬೆಂಕಿ ಕಾಣಿಸಿಕೊಂಡಿತು .ಆಶು ಅವರ ಕಿರುಚಾಟದ ಜೊತೆಗೆ ಸ್ಫೋಟದ ಶಬ್ದವನ್ನು ಕೇಳಿದ ಕುಟುಂಬದವರು ಸ್ಥಳಕ್ಕೆ ಓಡಿ ಹೋಗಿದ್ದಾರೆ. ಹೇಗೋ ಆಶು ಅವರನ್ನು ಬೆಂಕಿಯಿಂದ ಹೊರತೆಗೆದು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆಶು ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ ಎಂದು ವೈದ್ಯರು ಹೇಳಿದ್ದಾರೆ.