October 8, 2026
Thursday, October 8, 2026
spot_img

ಕಾಮನ್‌ವೆಲ್ತ್ ಗೇಮ್ಸ್ 2026: ಇಂದು ಜಾವೆಲಿನ್ ಫೈನಲ್, ಚಿನ್ನದ ಪದಕದ ಮೇಲೆ ನೀರಜ್ ಚೋಪ್ರಾ ಕಣ್ಣು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪ್ರತಿಷ್ಠಿತ ಕಾಮನ್‌ವೆಲ್ತ್ ಗೇಮ್ಸ್ 2026ರ ಕ್ರೀಡಾಕೂಟವು‌ ಇಂದು ಜುಲೈ 31ರಂದು ಅತ್ಯಂತ ರೋಚಕ ಹಂತವನ್ನು ತಲುಪಿದ್ದು, ಭಾರತೀಯ ಕ್ರೀಡಾಪ್ರೇಮಿಗಳ ಕಣ್ಣುಗಳು ಪದಕದ ಪಟ್ಟಿಯತ್ತ ನೆಟ್ಟಿವೆ. ಇಂದು ಭಾರತದ ಹೆಮ್ಮೆಯ ಜಾವೆಲಿನ್ ಥ್ರೋ ಆಟಗಾರ ನೀರಜ್ ಚೋಪ್ರಾ ಚಿನ್ನದ ಪದಕಕ್ಕಾಗಿ ಕಣಕ್ಕಿಳಿಯಲಿದ್ದು, ಮತ್ತೊಂದೆಡೆ ದಾಖಲೆಯ 10 ಭಾರತೀಯ ಬಾಕ್ಸರ್‌ಗಳು ಫೈನಲ್ ಪ್ರವೇಶಿಸಲು ಸೆಣಸಾಡಲಿದ್ದಾರೆ.

ಚಿನ್ನದ ಹುಡುಗನ ಮೇಲಿದೆ ಭರವಸೆ:

ಪುರುಷರ ಜಾವೆಲಿನ್ ಥ್ರೋ ವಿಭಾಗದ ಫೈನಲ್ ಪಂದ್ಯವು ಇಂದು ನಡೆಯಲಿದ್ದು, ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಮತ್ತೊಂದು ಚಿನ್ನದ ಪದಕವನ್ನು ಭಾರತದ ಮುಡಿಗೇರಿಸಲು ಸನ್ನದ್ಧರಾಗಿದ್ದಾರೆ. ಅವರ ಭರ್ಜರಿ ಪ್ರದರ್ಶನವನ್ನು ವೀಕ್ಷಿಸಲು ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ.

ಫೈನಲ್ ಆಸೆಯಲ್ಲಿ 10 ಬಾಕ್ಸರ್‌ಗಳು:

ಬಾಕ್ಸಿಂಗ್ ಅಖಾಡದಲ್ಲೂ ಇಂದು ಭಾರತಕ್ಕೆ ಅತ್ಯಂತ ಪ್ರಮುಖ ದಿನವಾಗಿದೆ. ಖ್ಯಾತ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಸೇರಿದಂತೆ ಒಟ್ಟು 10 ಭಾರತೀಯ ಬಾಕ್ಸರ್‌ಗಳು ಸೆಮಿಫೈನಲ್ ಪಂದ್ಯಗಳಲ್ಲಿ ಭಾಗವಹಿಸಲಿದ್ದಾರೆ. ಈ ಪಂದ್ಯಗಳಲ್ಲಿ ಜಯಗಳಿಸಿದರೆ ಅವರು ನೇರವಾಗಿ ಫೈನಲ್ ತಲುಪಲಿದ್ದು, ಭಾರತಕ್ಕೆ ಕನಿಷ್ಠ ಬೆಳ್ಳಿ ಅಥವಾ ಚಿನ್ನದ ಪದಕಗಳನ್ನು ಖಚಿತಪಡಿಸಿಕೊಳ್ಳುವ ಸುವರ್ಣ ಅವಕಾಶವಿದೆ.

ಇದನ್ನೂ ಓದಿ:

ಅಥ್ಲೆಟಿಕ್ಸ್‌ನಲ್ಲೂ ಹೈ ವೋಲ್ಟೇಜ್:

ಜಾವೆಲಿನ್ ಥ್ರೋ ಮತ್ತು ಬಾಕ್ಸಿಂಗ್ ಜೊತೆಗೆ ಅಥ್ಲೆಟಿಕ್ಸ್‌ನ ವಿವಿಧ ಸ್ಪರ್ಧೆಗಳಲ್ಲೂ ಭಾರತೀಯ ಕ್ರೀಡಾಪಟುಗಳು ಇಂದು ಭಾಗವಹಿಸುತ್ತಿದ್ದಾರೆ. ಇಂದಿನ ವೇಳಾಪಟ್ಟಿಯು ಭಾರತಕ್ಕೆ ಹಲವು ಪದಕಗಳನ್ನು ತಂದುಕೊಡುವ ಭರವಸೆ ಮೂಡಿಸಿದ್ದು, ಕ್ರೀಡಾಂಗಣದಲ್ಲಿ ಭಾರತೀಯರ ಧ್ವನಿ ಮೊಳಗಲಿದೆ.

Must Read