ಹೊಸದಿಗಂತ ವರದಿ ಬೆಳಗಾವಿ:
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಡಿ.10 ರಂದು ಬೆಳಗಾವಿ ಸುವರ್ಣಸೌಧದ ಹತ್ತಿರ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲಾಗುವುದು, ಸಮಾಜ ಬಾಂಧವರು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕೂಡಲಸಂಗ ಪೀಠದ ಜಗದ್ಗುರು ಶ್ರೀ ಬಸವಜಯಮೃತ್ಯುಂಜಯ ಮಹಾಸ್ವಾಮೀಜಿ ಅವರು ಹೇಳಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳ ಶಿಕ್ಷಣ ಹಾಗೂ ವಿದ್ಯಾರ್ಥಿಗಳ ಉದ್ಯೋಗಕ್ಕಾಗಿ ರಾಜ್ಯ ಸರ್ಕಾರದ 24 ಹಾಗೂ ಲಿಂಗಾಯತ ಉಪಸಮಾಜಗಳಿಗೆ ಕೇಂದ್ರ ಸರ್ಕಾರದ OBC ಮೀಸಲಾತಿಗಾಗಿ ರಾಜ್ಯ ಸರ್ಕಾರವು ಕೂಡಲೇ ಕೇಂದ್ರ ಸರ್ಕಾರಕ್ಕೆ ಸಿಪಾರಸ್ಸು ಮಾಡುವಂತೆ ಹಕ್ಕೊತ್ತಾಯಿಸಿ ಮತ್ತು 6 ವರ್ಷಗಳ ನಿರಂತರವಾಗಿ ಹೋರಾಟ ಮಾಡಲಾಗಿದೆ.
ಪಂಚಸಾಲಿ ಮೀಸಲಾತಿ ಚಳವಳಿ ನಿರಂತರವಾಗಿ ನಡೆದು ಬಂದಿದೆ. ಯಾವುದೇ ಸರ್ಕಾರ ಬರಲಿ, ಯಾವುದೇ ಸಿಎಂ ಬರಲಿ ನಮ್ಮ ಹಕ್ಕು ಈಡೇರುವ ವರೆಗೂ ಪ್ರಾಮಾಣಿಕವಾಗಿ ಹೋರಾಟ ನಡೆಸಲಾಗಿದೆ. ಇದು ನಮ್ಮ ನೋವಿನ ನೆನಪಿನ ಹೋರಾಟವಾಗಿದೆ. ಲಿಂಗಾಯತ ಸಮುದಾಯದ ಜನರು ಬಹಳಷ್ಟು ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು.
ಸರ್ಕಾರ ವಿರುದ್ಧ ಹೋರಾಟ:
ರಾಜ್ಯದಲ್ಲಿ ಡಿ.ಕೆ.ಶಿವಕುಮಾರ ಅವರು ಸಿಎಂ ಆದ ಬಳಿಕ ಸರ್ಕಾರದ ಗಮನ ಸೆಳೆಯಲು ಡಿ.10 ರಂದು ಸಮಾಜ ಬಾಂಧವರೊಂದಿಗೆ ಬೆಳಗಾವಿಯಲ್ಲಿ ಉಪವಾಸ ಸತ್ಯಾಗ್ರಹ ಮಾಡಲಿದ್ದೇವೆ ಎಂದರು. 2024ರಲ್ಲಿ ಡಿ.10 ರಂದು ಮೀಸಲಾತಿಗೆ ಹೋರಾಟ ನಡೆದ ನಮ್ಮ ಸಮುದಾಯದ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಲಾಗಿತ್ತು.
ಜನ ಕಣ್ಣೀರು ಹಾಕಿದರು. ಆ ನೋವಿನ ದಿನವನ್ನು ಲಿಂಗಾಯತರ ಮೇಲಿನ ದೌರ್ಜನ್ಯ ದಿನ ಎಂದು ತೀರ್ಮಾನಿಸಿದ್ದೇವೆ. ಆ ದಿನದ ಅಂಗವಾಗಿ ಮುಂದಿನ ತಿಂಗಳ ಡಿ.10 ರಂದು ಮತ್ತೆ ಬೆಳಗಾವಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಯಲಿದೆ. ಮನೆಗೊಬ್ಬರಂತೆ, ಊರಿಗೆ ಒಂದು ವಾಹನದಂತೆ ಜನತೆ ಬರಬೇಕು.
ಕೆಲವರಿಗೆ ಉಪವಾಸ ಮಾಡಲು ಆಗದೇ ಇರುವವರು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲಿ ಆದರೆ ಪ್ರಸಾದ ಮಾಡಲಿ. ನಾವು ಉಪವಾಸ ಸತ್ಯಾಗ್ರಹ ನಡೆಸಲಿದ್ದೇವೆ. ನಮ್ಮ ಹೋರಾಟ ಮೀಸಲಾತಿ ಸಿಗುವ ವರೆಗೂ ನಾವು ಹೋರಾಟ ಮಾಡಲಿದ್ದೇವೆ. ಸಿಎಂಗೂ ಮೀಸಲಾತಿಗೆ ಮನವಿ ಮಾಡಿದ್ದೇವೆ. ಸಿಎಂ ಸಹಿತ ಈ ಹಿಂದೆ ನಮಗೆ ಸಮಾಜಕ್ಕೆ ಸ್ಪಂದಿಸುವೆ ಎಂದಿದ್ದರು. ಈಗ ಡಿಕೆಶಿ ಅವರಿಗೆ ಅವಕಾಶ ಸಿಕ್ಕಿದೆ. ಮೀಸಲಾತಿ ಕಲ್ಪಿಸಬೇಕು ಎಂದರು.
2ಎಗೆ ಮೀಸಲಾತಿ ನೀಡುವಂತೆ ಕೇಂದ್ರಕ್ಕೆ ಮನವಿ:
ಕೇಂದ್ರದಲ್ಲಿ ಅಖಂಡ ಲಿಂಗಾಯತರನ್ನು ಓಬಿಸಿ ಪಟ್ಟಿಗೆ ಸೇರಿಸಲಿ. ಹಿಂದೆ ಬೊಮ್ಮಾಯಿ ಸರ್ಕಾರ 2ಡಿ ವರ್ಗ ಕೊಟ್ಟಿತ್ತು. ಆದರೆ ಸುಪ್ರೀಂ ಕೋರ್ಟ್ನಲ್ಲಿದೆ. ಅದನ್ನಾದರೂ ನಮಗೆ ಅನುಷ್ಟಾನ ಮಾಡಬೇಕು. ಉಪವಾಸ ಸತ್ಯಾಗ್ರಹಕ್ಕೆ ಪ್ರತಿಯೊಬ್ಬರೂ ಬರಬೇಕು ಎಂದರು.
ಈ ವೇಳೆ ನ್ಯಾಯವಾದಿ ಆರ್ .ಪಿ.ಪಾಟೀಲ್, ಮಹಾಂತೇಶ ಮಾಲಶೇಟ್ಟಿ, ಮನೋಹರ ಪುಡಲಕಟ್ಟಿ, ಗುಂಡು ಪಾಟೀಲ್ , ಶಿವಾನಂದ ತಂಬಾಕೆ , ಪ್ರಜ್ವಲ್ ಪಾಟೀಲ್ , ಹಾಗೂ ಸಮಾಜದ ಮುಖಂಡರು ಸೇರಿದಂತೆ ಇತರರು ಪಾಲ್ಗೊಂಡಿದ್ದರು.



