ಹೊಸದಿಗಂತ ವರದಿ ಕಲಬುರಗಿ:
ಜಿಲ್ಲೆಯ ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದ ಒಳಗಿನ ಅಪವಿತ್ರಗೊಂಡ ಶಿವಲಿಂಗ ಸ್ವಚ್ಛತೆ ಹಾಗೂ ಪೂಜೆ ವೇಳೆ ಕೋಮು ಗಲಭೆ ಸೃಷ್ಟಿಸಿ, ಕಲ್ಲು ತೂರಾಟ ನಡೆದ ಪ್ರಕಣದ ಮಾಸ್ಟರ್ ಮೈಂಡ್ ಫಿರ್ದೋಸ್ ಖಾನ್ ಗಡಿ ಪಾರು ಮಾಡಲು ಜಿಲ್ಲಾಡಳಿತ ಸಜ್ಜಾಗಿದೆ.
ಶಿವರಾತ್ರಿ ಹಬ್ಬದಂದು, ಲಾಡ್ಲೆ ಮಶಾಕ್ ದರ್ಗಾದ ಒಳಗಿನ ಶಿವಲಿಂಗ ಪೂಜೆಗೆ ಕೇಂದ್ರ ಸಚಿವ ಭಗವಂತ ಖೂಬಾ ಮತ್ತು ಬಿಜೆಪಿ ಶಾಸಕರು ತೆರಳಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಾರು, ಸೇರಿದಂತೆ ಕೇಂದ್ರ ಸಚಿವರ ಹಾಗೂ ಶಾಸಕರ ಕಾರು ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಈ ಪ್ರಕಣದಲ್ಲಿ ಫಿರ್ದೋಸ್ ಖಾನ್ ಪಾತ್ರವಿರುವುದು ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಅವನನ್ನು ಗಡಿಪಾರು ಮಾಡಲು ಮುಂದಾಗಿದೆ. ಸದ್ಯ ಫಿರ್ದೋಸ್ ಖಾನ್ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಇದ್ದಾನೆ.
ಯುಪಿಯಲ್ಲಿ ಬುಲ್ಡೋಜರ್ ಮಾದರಿಯಂತೆ, ರಾಜ್ಯದಲ್ಲಿ ಕೋಮು ಗಲಭೆಯಲ್ಲಿ ಭಾಗಿಯಾಗಿರುವ ಪುಂಡರನ್ನು ಮಟ್ಟಹಾಕಲು ರಾಜ್ಯ ಸರ್ಕಾರ ಗುಂಡಾ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಿ, ಗಡಿ ಪಾರು ಮಾಡಲು ಆದೇಶ ಮಾಡಿದೆ.