ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಸೋಭಿತಾ ಧುಲಿಪಾಲ ಹಾಗೂ ನಾಗಚೈತನ್ಯ ಇತ್ತೀಚೆಗಷ್ಟೇ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಇವರ ಎಂಗೇಜ್ಮೆಂಟ್ ನಂತರ ಜ್ಯೋತಿಷಿ ವೇಣು ಸ್ವಾಮಿ ಈ ಜೋಡಿ ಕೊನೆವರೆಗೂ ಇರುವುದಿಲ್ಲ. ಡಿವೋರ್ಸ್ ಆಗುತ್ತದೆ ಎಂದು ಹೇಳಿದ್ದರು.
ಇದರಿಂದ ಕುಪಿತಗೊಂಡ ಅಕ್ಕಿನೇನಿ ಫ್ಯಾಮಿಲಿ ಜ್ಯೋತಿಷಿ ವಿರುದ್ಧ ದೂರು ನೀಡಿದ್ದಾರೆ. ಈ ಹಿಂದೆ ಕೂಡ ಇದೇ ಜ್ಯೋತಿಷಿ ಸಮಂತಾ ಹಾಗೂ ನಾಗಚೈತನ್ಯ ಡಿವೋರ್ಸ್ ಆಗುತ್ತದೆ ಎಂದು ಭವಿಷ್ಯ ಹೇಳಿದ್ದರು. ಈ ಬಾರಿ ನಾಗಚೈತನ್ಯ ಹಾಗೂ ಸೋಭಿತಾ ಮಧ್ಯೆ ಮತ್ತೊಬ್ಬ ಹೆಣ್ಣು ಬರುತ್ತಾಳೆ ಅವಳಿಂದ ಇವರು ದೂರಾಗ್ತಾರೆ ಎಂದು ಹೇಳಿದ್ದಾರೆ.
ನಾನು ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿ ಜಾತಕ ವಿಶ್ಲೇಷಣೆ ಮಾಡುವುದಿಲ್ಲ ಎಂದು ಹೇಳಿದ್ದೆ. ಆದರೆ ಈ ಹಿಂದೆ ನಾಗ ಚೈತನ್ಯ-ಸಮಂತಾರ ಜಾತಕ ವಿಶ್ಲೇಷಣೆ ಮಾಡಿದ್ದೆ, ಅದು ಹೇಳಿದ್ದಂತೆ ನಡೆದಿತ್ತು, ಅದೇ ಜಾತಕ ವಿಶ್ಲೇಷಣೆಯ ಮುಂದುವರೆದ ಭಾಗವಾಗಿ ಶೋಭಿತಾ-ನಾಗ ಚೈತನ್ಯ ಜಾತಕ ವಿಶ್ಲೇಷಣೆ ಮಾಡಿದ್ದೇನೆ. ಆದರೆ ಇನ್ನು ಮುಂದೆ ಯಾವುದೇ ಸಿನಿಮಾ ಸೆಲೆಬ್ರಿಟಿಗಳಾಗಲಿ, ರಾಜಕೀಯ ವಿಶ್ಲೇಷಣೆಯನ್ನಾಗಲಿ ನಾನು ಸಾಮಾಜಿಕ ಜಾಲತಾಣದಲ್ಲಿ ಮಾಡುವುದಿಲ್ಲ ಎಂದು ಜ್ಯೋತಿಷಿ ಹೇಳಿದ್ದಾರೆ.