March 15, 2026
Sunday, March 15, 2026
spot_img

ಎಐ ಬಳಸಿ ಫೋಟೊ ಎಡಿಟಿಂಗ್‌, ಮತಾಂತರಕ್ಕೆ ಫೋರ್ಸ್‌ ಮಾಡಿದ ವ್ಯಕ್ತಿ ವಿರುದ್ಧ ದೂರು

ಹೊಸದಿಗಂತ ವರದಿ ಹುಬ್ಬಳ್ಳಿ:

ಯುವತಿ ಜೊತೆ ಫೋಟೊ ತೆಗೆಸಿಕೊಂಡು ಎಐನಲ್ಲಿ ಎಡಿಟಿಂಗ್ ಮಾಡಿ, ಮತಾಂತರಕ್ಕೆ ಬಲವಂತ ಮಾಡಿದ ವ್ಯಕ್ತಿಯ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜನಗರದ ನಿವಾಸಿ ಜಾಫರ್ ವಿರುದ್ಧ, ಧಾರವಾಡದ ಯುವತಿ ಗೀತಾ ತಾಯಿ ದೂರು ನೀಡಿದ್ದಾರೆ.

ದೂರಿನಲ್ಲಿ ಏನಿದೆ?

ಜಾಫರ್ ಮತ್ತು ಗೀತಾ ಒಂದೇ ಕಡೆ ಕೆಲಸ ಮಾಡುತ್ತಿದ್ದು, ಪರಸ್ಪರ ಸ್ನೇಹದಿಂದ ಇದ್ದರು. ಮಗಳನ್ನು ಪುಸಲಾಯಿಸಿ ಜಾಫರ್‌ನು, ಅವಳ ಜೊತೆ ಫೋಟೊ ತೆಗೆಸಿಕೊಂಡು ಎಐನಲ್ಲಿ ಎಡಿಟ್ ಮಾಡಿ ಮೊಬೈಲ್‌ ಫೋನ್‌ಲ್ಲಿ ಇಟ್ಟುಕೊಂಡಿದ್ದ. ತನ್ನ ಜೊತೆಗೆ ಬರದಿದ್ದರೆ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿ, 1.50 ಲಕ್ಷ ಪಡೆದಿದ್ದ. ಮಾನಸಿಕ ಕಿರುಕುಳ ನೀಡಿ, ಮತಾಂತರ ಮಾಡುವ ಉದ್ದೇಶದಿಂದ ಅವಳನ್ನು ದರ್ಗಾಕ್ಕೆ ಕರೆದೊಯ್ದು ತಾಯಿತ ಕಟ್ಟಿಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !