ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಕೊಚ್ಚಿಯಲ್ಲಿ ರೋಡ್ಶೋನಲ್ಲಿ ಭಾಗಿಯಾಗಿದ್ದ ವೇಳೆ ತಮ್ಮ ಕಾರಿನ ಬಾಗಿಲು ತೆಗೆದುಕೊಂಡು ಸಾಗಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ತ್ರಿಶೂರಿನ ನಿವಾಸಿಯೊಬ್ಬರು ದೂರು ನೀಡಿದ್ದಾರೆ.
ಚಲಿಸುತ್ತಿರುವ ಕಾರಿನಲ್ಲಿ ಬಾಗಿಲು ತೆರೆದು ನಿಲ್ಲುವುದು ಅಪಾಯಕಾರಿ ಜೊತೆಗೆ ಪ್ರತಿಯೊಬ್ಬರೂ ಕಾನೂನು ಪಾಲನೆ ಮಾಡುವಂತೆ ಸಮಾಜಕ್ಕೆ ಸ್ಪಷ್ಟ ಸಂದೇಶ ರವಾನೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಯಕೃಷ್ಣನ್ ದೂರಿನಲ್ಲಿ ಆಗ್ರಹಿಸಿದ್ದಾರೆ.
ಸಂಚಾರ ನಿಯಮಗಳ ಉಲ್ಲಂಘನೆ ಆರೋಪದಡಿ ಪ್ರಧಾನಿ ವಿರುದ್ಧ ಕೇರಳ ಡಿಜಿಪಿ ಹಾಗೂ ಕೇರಳ ಮೋಟಾರು ವಾಹನ ಇಲಾಖೆಗೆ ಜಯಕೃಷ್ಣನ್ ದೂರು ಕೊಟ್ಟಿದ್ದಾರೆ.
ಏಪ್ರಿಲ್ 24 ಮತ್ತು 25ರಂದು ಎರಡು ದಿನಗಳ ಕೇರಳ ಪ್ರವಾಸ ಕೈಗೊಂಡಿದ್ದ ಪ್ರಧಾನಿ ಮೋದಿ ರೋಡ್ ಶೋ ನಡೆಸಿದ್ದರು. ಈ ಬಗ್ಗೆ ಏಪ್ರಿಲ್ 26ರಂದು ತ್ರಿಶೂರ್ ಮೂಲದ ಜಯಕೃಷ್ಣನ್ ಎಂಬುವರು ರಾಜ್ಯ ಪೊಲೀಸ್ ಮುಖ್ಯಸ್ಥ ಅನಿಲ್ಕಾಂತ್ ಹಾಗೂ ಮೋಟಾರು ವಾಹನ ಇಲಾಖೆಗೆ ದೂರು ಸಲ್ಲಿಸಿದ್ದಾರೆ.