ಆಪಾದನೆ ನಿಲ್ಲಿಸದಿದ್ದರೆ ಹೈಕಮಾಂಡ್ ಗೆ ದೂರು: ಕಾಂಗ್ರೆಸ್ ನಾಯಕಿ ವೀಣಾಗೆ ಜೆ.ಟಿ.ಪಾಟೀಲ್ ಎಚ್ಚರಿಕೆ

ಹೊಸದಿಗಂತ ವರದಿ, ಬಾಗಲಕೋಟೆ :

ಪದೇ ಪದೇ ಬೆಣ್ಣಿಗೆ ಚೂರಿ ಹಾಕಿದರು ಎಂದು ಕಾಂಗ್ರೆಸ್ ಶಾಸಕರ ಮೇಲೆ ಆರೋಪ ಮಾಡುವುದನ್ನು ನಿಲ್ಲಿಸಬೇಕು. ಬೆಣ್ಣಿಗೆ ಚೂರಿ ಹಾಕುವ ಕೆಲಸ ಎಂದೂ ಮಾಡಿಲ್ಲ. ಆ ರೀತಿ ಮಾಡಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದು ಬೀಳಗಿ ಮತಕ್ಷೇತ್ರದ ಶಾಸಕ ಜೆ.ಟಿ.ಪಾಟೀಲ್ ಹೇಳಿದ್ದಾರೆ.

ನಗರದ ಚರಂತಿಮಠದ ಶಿವಾನುಭವ ಮಂಟಪದಲ್ಲಿ ಬಾಗಲಕೋಟೆ ವಿಧಾನಸಭೆ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು,ವೀಣಾ ಕಾಶಪ್ಪನ ವಿರುದ್ಧ ಪರೋಕ್ಷವಾಗಿ ಗುಡುಗಿದ ಅವರು, ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರ ಮೇಲೆ ಆಪಾದನೆ ಹೊರೆಸುವುದು ಸರಿಯಲ್ಲ. ಈ ಆಪಾದನೆ ನಾವು ಹೊರಲು ಸಾಧ್ಯವಿಲ್ಲ ಎಂದರು.

ಪದೇ ಪದೇ ನನ್ನನ್ನೂ ಹಿಡಿದು ಶಾಸಕರ ಮೇಲೆ ಆರೋಪ ಮಾಡಿದರೆ ಸಹಿಸಲು ಆಗುವುದಿಲ್ಲ. ಇದೇ ರೀತಿ ಆರೋಪ ಮುಂದುವರೆದರೆ ಎಐಸಿಸಿ ಹಾಗೂ ಕೆಪಿಸಿಸಿಗೆ ದೂರ ನೀಡಬೇಕಾಗುತ್ತದೆ ಎಂದು ಪರೋಕ್ಷವಾಗಿ ವೀಣಾ ಕಾಶಪ್ಪನವರ ಗೆ ಹೇಳಿದರು.

ಹಿಂದೆ ನಾನು ಲೋಕ ಸಭೆ ಚುನಾವಣೆಗೆ ಸ್ಪರ್ಧೆ ಮಾಡಿದಾಗ ಎಲ್ಲ ಕಾಂಗ್ರೆಸ್ ಪಕ್ಷದವರು ಒಗ್ಗಟ್ಟಿನಿಂದ ಚುನಾವಣೆ ಮಾಡಿದ್ದರೆ ನಾನು ಗೆಲ್ಲುತ್ತಿದ್ದೆ. ನಮ್ಮವರ ತಪ್ಪಿನಿಂದ ಕಾಂಗ್ರೆಸ್ ಸೋಲಾಯಿತು. ಈ ಭಾರಿ ಕಾರ್ಯಕರ್ತರು, ನಾಯಕರು ಒಗ್ಗಟ್ಟಾಗಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಅವರನ್ನು ಗೆಲ್ಲಿಸಬೇಕು ಎಂದರು.

ಮಾಜಿ ಸಚಿವ ಎಸ್.ಆರ್.ಪಾಟೀಲ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ. ಪಕ್ಷ ದೊಡ್ಡದಿದೆ‌. ಲೋಕಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ನಿಶ್ಷಿತ ಎಂದರು.

ಸಚಿವ ಶಿವಾನಂದ ಪಾಟೀಲ್ ಮಾತನಾಡಿ, ಈ ಭಾರಿ ಎರಡು ಲಕ್ಷ ಮತಗಳ ಅಂತರದಿಂದ. ನಮ್ಮ‌ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!