ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಟ್ಕಾ, ಪಾನ್ ಮಸಾಲಾದಲ್ಲಿ ಡ್ರಗ್ಸ್ ಪತ್ತೆಯಾದ್ರೆ ಸಂಪೂರ್ಣ ಬ್ಯಾನ್ ಮಾಡಲಾಗುತ್ತದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ವಾರ್ನಿಂಗ್ ನೀಡಿದ್ದಾರೆ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 31ನೇ ಸಂಸ್ಥಾಪನಾ ದಿನಾಚರಣೆ ಹಾಗೂ ‘ನಶಾ ಮುಕ್ತ್ ಭಾರತ್ (ಮಾದಕವಸ್ತು ಮುಕ್ತ ಭಾರತ)’ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ, ತಂಬಾಕು ಉತ್ಪನ್ನಗಳಲ್ಲಿ ಅಲ್ಪ ಪ್ರಮಾಣದಲ್ಲಿ ಮಾದಕ ದ್ರವ್ಯಗಳು ಇದ್ದರೂ ಅವುಗಳನ್ನು ತಕ್ಷಣವೇ ನಿಷೇಧ ಮಾಡುತ್ತೇವೆ ಎಂದಿದ್ದಾರೆ.
ಪಾನ್ ಮಸಾಲಾ, ಗುಟ್ಕಾದಿಂದ ಕಿಕ್ ಪಡೆಯುತ್ತಿರುವ ವಿಷಯ ನನ್ನ ಗಮನಕ್ಕೆ ಬಂದಿದೆ. ಎಲ್ಲಾ ತಯಾರಕರಿಗೂ ಎಚ್ಚರಿಕೆ ಕೊಡ್ತೀನಿ. ಮಾದಕ ಅಂಶ ಪತ್ತೆಯಾದ್ರೆ ಮುಲಾಜಿಲ್ಲದೆ ಬ್ಯಾನ್ ಮಾಡ್ತೀನಿ. ಈ ಉತ್ಪನ್ನಗಳ ನಿಷೇಧದಿಂದ ಸರ್ಕಾರಕ್ಕೆ ಸುಮಾರು 100 ಕೋಟಿ ರೂಪಾಯಿಗಳಷ್ಟು ಕಂದಾಯ ನಷ್ಟವಾಗಬಹುದು. ಆದರೆ, ಜನರ ಜೀವ ಹಾಗೂ ಯುವ ಪೀಳಿಗೆಯ ಭವಿಷ್ಯದ ಮುಂದೆ ನಮಗೆ ಹಣ ಮುಖ್ಯವಲ್ಲ. ನಿಮ್ಮ ಉತ್ಪನ್ನಗಳಲ್ಲಿ ಸಣ್ಣ ಪ್ರಮಾಣದ ಡ್ರಗ್ಸ್ ಮಿಶ್ರಣ ಮಾಡಿರುವುದು ಕಂಡುಬಂದರೂ ಸಹ ಇಡೀ ಕರ್ನಾಟಕದಲ್ಲಿ ಇವುಗಳ ಮಾರಾಟವನ್ನು ನಿಷೇಧಿಸಲು ನಾನು ಹಿಂಜರಿಯುವುದಿಲ್ಲ ಎಂದಿದ್ದಾರೆ.



