ಹೊಸದಿಗಂತ ಡಿಜಿಟಲ್ ಡೆಸ್ಕ್:
ರಸ್ತೆಯಲ್ಲಿ ತಲೆ ಎತ್ತುತ್ತಿರುವ ಅಪಾರ್ಟ್‌ಮೆಂಟ್ ಒಂದು ಇಡೀ ಏರಿಯಾ ಜನರ ವಿರೋಧಕ್ಕೆ ಕಾರಣವಾಗಿದೆ. ಸಣ್ಣ ರಸ್ತೆಯನ್ನೇ ಆಕ್ರಮಿಸಿಕೊಂಡು ಕಾಂಪೌಂಡ್ ನಿರ್ಮಿಸಲಾಗುತ್ತಿದ್ದು, ಜನರಿಗೆ ಓಡಾಡಲು ಕಿರಿಕಿರಿ ಆಗುತ್ತಿದೆ.
ಇತ್ತ ರೂಲ್ಸ್ ಬ್ರೇಕ್ ಆಗಿದ್ದರೂ ಪಾಲಿಕೆ ಕಣ್ಮುಚ್ಚಿ ಕುಳಿತಿರೋದು ಏರಿಯಾ ಜನರ ಆಕ್ರೋಶ ಕೆರಳಿಸಿದೆ. ಮನವಿ ನೀಡಿ ಸುಸ್ತಾದ ಜನರು ರಸ್ತೆಗಿಳಿದು ಪ್ರತಿಭಟನೆ ಮಾಡಿದ್ದಾರೆ.
ಉತ್ತರಹಳ್ಳಿ ಹೋಬಳಿಯ ಚಿಕ್ಕಲ್ಲಸಂದ್ರದ ರಸ್ತೆಯಲ್ಲಿ ನಿನ್ನ ಏರಿಯಾ ಜನರು ಪ್ರತಿಭಟನೆ ಮಾಡಿದ್ದಾರೆ. ಅಷ್ಟಕ್ಕೂ ಈ ಜನರ ಸಿಟ್ಟಿಗೆ ಕಾರಣವಾಗಿರುವುದು ಇದೇ ರಸ್ತೆಯಲ್ಲಿ ತಲೆ ಎತ್ತಿರುವ ಕೋಮರ್ಲ, ನಂದಾ ಬ್ರಿಗೇಡ್ ಅಪಾರ್ಟ್‌ಮೆಂಟ್.
ಸದ್ಯ ಮುಗಿಲೆತ್ತರ ಕಟ್ಟಡ ಕಟ್ಟಿರುವ ಅಪಾರ್ಟ್‌ಮೆಂಟ್ ಗ್ರೂಪ್, ಇದೀಗ ಇರುವ ಕಿರಿದಾದ ರಸ್ತೆ ಬಳಿಯೇ ಕಾಂಪೌಂಡ್ ನಿರ್ಮಿಸೋಕೆ ಹೊರಟಿರೋದು ಏರಿಯಾ ಜನರ ಆಕ್ರೋಶದ ಕಟ್ಟೆ ಒಡೆಯುವಂತೆ ಮಾಡಿದೆ. ಮೊದಲೇ ಚಿಕ್ಕದಾದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದ್ದರೂ ಕಾಂಪೌಂಡ್ ಕಟ್ಟೋಕೆ ಹೊರಟಿರುವ ಅಪಾರ್ಟ್‌ಮೆಂಟ್ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.