ಹೊಸದಿಗಂತ ವರದಿ ಕೊಪ್ಪಳ:
ವಿಧಾನಸಭಾ ಕ್ಷೇತ್ರದ ಜೆಡಿ (ಎಸ್) ಅಭ್ಯರ್ಥಿಯಾದ ಸಿ ವಿ ಚಂದ್ರಶೇಖರ್ ಹಾಗೂ ಅವರ ಧರ್ಮಪತ್ನಿ ಲಕ್ಷ್ಮಿ ದೇವಿ ಚಂದ್ರಶೇಖರ್ ಅವರು ಕೊಪ್ಪಳ ನಗರದ ಲಕ್ಷ್ಮಿ ಚಿತ್ರಮಂದಿರದ ಹತ್ತಿರ ಇರುವ ಕೆಇಬಿ ಕಚೇರಿ ಸಮೀಪ ಸ್ಥಾಪಿಸಲಾಗಿದ್ದ (ಬೂತ್ ಸಂಖ್ಯೆ 152) ಮತಗಟ್ಟೆಯಲ್ಲಿ ತಮ್ಮ ಮತ ಚಲಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯುವ ಜನತೆ, ಮಹಿಳೆಯರು ಸೇರಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ. ಮತದಾನದಿಂದ ಯಾರೂ ದೂರ ಉಳಿಯಬಾರದು ಎಂದರು.