ಶ್ರೀಕಾಂತ್ ಪೂಜಾರಿಗೆ ಷರತ್ತುಬದ್ಧ ಜಾಮೀನು: ಪ್ರತಿಭಟನೆ ಕೈಬಿಟ್ಟ ಬಿಜೆಪಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಮಜನ್ಮಭೂಮಿಯ ಕರಸೇವಕ ಆರೋಪಿ ಶ್ರೀಕಾಂತ್ ಪೂಜಾರಿಗೆ ಷರತ್ತುಬದ್ಧ ಜಾಮೀನು ಮಂಜೂರು ಹಿನ್ನಲೆ ಜ.9 ರಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ(BY vijayendra)ನೇತೃತ್ವದಲ್ಲಿ ನಿಗದಿಯಾಗಿದ್ದ ಪ್ರತಿಭಟನೆಯನ್ನು ರಾಜ್ಯ ಬಿಜೆಪಿ ಘಟಕ ಕೈಬಿಟ್ಟಿದೆ.

ಶ್ರೀಕಾಂತ್​ ಬಿಡುಗಡೆಗೆ ಆಗ್ರಹಿಸಿ ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಬಿಜೆಪಿ ನಿರ್ಧರಿಸಿತ್ತು. ಆದರೀಗ ಜಾಮೀನು ಮಂಜೂರಾದ ಹಿನ್ನೆಲೆ ಠಾಣೆಗೆ ಮುತ್ತಿಗೆ ಹಾಕುವುದನ್ನು ರದ್ದುಪಡಿಸಿದೆ.

ಹುಬ್ಬಳ್ಳಿಯ ಒಂದನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದಿಂದ ಆರೋಪಿ ಶ್ರೀಕಾಂತ್​ ಪೂಜಾರಿಗೆ ಷರತ್ತುಬದ್ದ ಜಾಮೀನು ಮಂಜೂರು ಮಾಡಲಾಗಿದೆ. ಆದರೆ, 1 ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಿಂದ ತೀರ್ಪು ಬಂದ ನಂತರ ದಾಖಲೆಗಳನ್ನು 5 ಮತ್ತು 3ನೇ ಜೆಎಮ್ಎಫ್‌ಸಿ ನ್ಯಾಯಾಲಕ್ಕೆ ನೀಡಬೇಕು. ಬಳಿಕ ಆ ತೀರ್ಪು ಆದೇಶವನ್ನ ಈ ಎರಡೂ ಕೋರ್ಟ್‌ಗಳಿಗೆ ತಲುಪಿಸಬೇಕು. ನಂತರ ಸಂಜೆ 6 ಗಂಟೆಯೊಳಗೆ ತೀರ್ಪಿನ ಆದೇಶ ಜೈಲು ಅಧಿಕಾರಿಗಳ ಕೈ ಸೇರಬೇಕು. ಸಮಯದ ಅಭಾವದಿಂದ ತೀರ್ಪು ಆದೇಶ ಕೈ ಸೇರುವುದು ತಡವಾದರೆ ಶ್ರೀಕಾಂತಗೆ ಇಂದು ಬಿಡುಗಡೆ ಭಾಗ್ಯವಿಲ್ಲ ಎನ್ನಲಾಗುತ್ತಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!