Thursday, March 23, 2023

Latest Posts

ಕೆಎಸ್ಸಾರ್ಟಿಸಿ ಬಸ್ – ಕಾರಿನ ನಡುವೆ ಮುಖಾಮುಖಿ ಡಿಕ್ಕಿ: ಬಾಲಕ ಸಾವು, ಇಬ್ಬರು ಗಂಭೀರ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೆಎಸ್ಸಾರ್ಟಿಸಿ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಂಡ್ಯದ ಕೆ.ಆರ್.ಪೇಟೆ ನಿವಾಸಿ ನಟೇಶ್ ಅವರ ಪುತ್ರ ಪೃಥ್ವಿ (12) ಮೃತಪಟ್ಟ ಘಟನೆ ಕಡಬ-ಸುಬ್ರಹ್ಮಣ್ಯ ಹೆದ್ದಾರಿಯ ಮರ್ದಾಳದ ಐತ್ತೂರು ಗ್ರಾ.ಪಂ. ಕಚೇರಿ ಬಳಿ ಸೋಮವಾರ ಸಂಭವಿಸಿದೆ.

ಮರ್ದಾಳ ಕಡೆಯಿಂದ ಸುಬ್ರಹ್ಮಣ್ಯದತ್ತ ಸಾಗುತ್ತಿದ್ದ ಕಾರು ಇನ್ನೊಂದು ವಾಹನವನ್ನು ಓವರ್‌ಟೇಕ್ ಮಾಡುವ ಧಾವಂತದಲ್ಲಿ ಎದುರಿನಿಂದ ಬರುತ್ತಿದ್ದ ಬಸ್‌ಗೆ ಅಪ್ಪಳಿಸಿದೆ. ಕಾರಿನಲ್ಲಿದ್ದ ಮೃತ ಬಾಲಕನ ತಂದೆ ನಟೇಶ್ (45), ತಾಯಿ ರೂಪಾ (30), ಸಂಬಂಽಕರಾದ ರೋಹಿಣಿ (20), ಕೃಷ್ಣೇ ಗೌಡ (45), ರವಿ (38) ಹಾಗೂ ಪಾರ್ವತಿ (38) ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ ನಟೇಶ್ ಹಾಗೂ ರೂಪಾ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!