ಲೋಕಸಭಾ ಚುನಾವಣಾ ಅಖಾಡಕ್ಕೆ ಇಳಿದ ಕಾಂಗ್ರೆಸ್: ರಾಜ್ಯದ 28 ಕ್ಷೇತ್ರಗಳಿಗೆ ವೀಕ್ಷಕರ ನೇಮಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

2024ರ ಲೋಕಸಭಾ ಚುನಾವಣೆ ಗೆ ರಾಜ್ಯ ಕಾಂಗ್ರೆಸ್ ರೆಡಿಯಾಗಿದ್ದು, ಎಲ್ಲಾ 28 ಲೋಕಸಭಾ ಕ್ಷೇತ್ರಗಳಿಗೂ (Lokasabha Constituencies) ವೀಕ್ಷಕರನ್ನು ನೇಮಿಸುವ (Observers appointed) ಮೂಲಕ ಮೊದಲ ಹೆಜ್ಜೆ ಇಟ್ಟಿದೆ.

ಕಳೆದ ಬಾರಿ ಕೇವಲ ಒಂದೇ ಒಂದು ಸ್ಥಾನ ಗೆಲ್ಲುವಲ್ಲಿ ಸಫಲವಾಗಿದ್ದ (ಬೆಂಗಳೂರು ಗ್ರಾಮಾಂತರ) ಕಾಂಗ್ರೆಸ್‌ ಈ ಬಾರಿ ಟಾರ್ಗೆಟ್‌ 20ಯನ್ನು ಇಟ್ಟುಕೊಂಡಿದೆ. ಕಳೆದ ಬಾರಿ ಬಿಜೆಪಿ 25, ಕಾಂಗ್ರೆಸ್‌ ಮತ್ತು ಬಿಜೆಪಿ ತಲಾ ಒಂದು ಹಾಗೂ ಪಕ್ಷೇತರರಾಗಿ ಸುಮಲತಾ ಗೆದ್ದಿದ್ದರು. ಈ ಬಾರಿ ಸುಮಲತಾ ಅವರು ಬಿಜೆಪಿಯ ಸಹಸದಸ್ಯೆಯಾಗಿದ್ದಾರೆ. ಈ ಬಾರಿ ರಾಜ್ಯದ ಎಲ್ಲ 28 ಕ್ಷೇತ್ರಗಳನ್ನು ಗೆಲ್ಲುವುದು ಬಿಜೆಪಿ ರಣತಂತ್ರ. ಎರಡೂ ಪಾಳಯಗಳು ಬಿಗಿಯಾದ ಹೋರಾಟಕ್ಕೆ ಅಣಿಯಾಗುತ್ತಿರುವ ಹೊತ್ತಿನಲ್ಲಿ ಕಾಂಗ್ರೆಸ್‌ ವೀಕ್ಷಕರ ನೇಮಕದ ಮೂಲಕ ಮೊದಲ ಬಾಣ ಬಿಟ್ಟಿದೆ.

ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್‌ ಅವರು ಈ ಸುತ್ತೋಲೆಯನ್ನು ಹೊರಡಿಸಿದ್ದು, ತಕ್ಷಣದಿಂದ ಕಾರ್ಯಾಚರಣೆ ಶುರು ಮಾಡುವಂತೆ ಸೂಚಿಸಿದ್ದಾರೆ.

ಯಾವ ಕ್ಷೇತ್ರಕ್ಕೆ ಯಾರು ವೀಕ್ಷಕರು?

1.ಬಾಗಲಕೋಟೆ: ಪ್ರಿಯಾಂಕ ಖರ್ಗೆ
2.ಬೆಂಗಳೂರು ಸೆಂಟ್ರಲ್‌: ಎನ್‌ಎಸ್‌ ಬೋಸರಾಜು
3.ಬೆಂಗಳೂರು ಉತ್ತರ: ಡಾ. ಜಿ. ಪರಮೇಶ್ವರ್‌
4.ಬೆಂಗಳೂರು ಗ್ರಾಮಾಂತರ: ಕೆ. ವೆಂಕಟೇಶ್‌
5.ಬೆಂಗಳೂರು ದಕ್ಷಿಣ : ಡಾ. ಶರಣ್‌ ಪ್ರಕಾಶ್‌ ಪಾಟೀಲ್‌
6. ಬೆಳಗಾವಿ: ಶಿವರಾಜ್‌ ಎಂ. ತಂಗಡಗಿ
7. ಗುಲ್ಬರ್ಗ: ಬಿ. ನಾಗೇಂದ್ರ
8. ಬೀದರ್‌: ಸಂತೋಷ್‌ ಎಸ್‌. ಲಾಡ್‌
9. ವಿಜಯಪುರ: ಸತೀಶ್‌ ಜಾರಕಿಹೊಳಿ
10. ಚಾಮರಾಜ ನಗರ: ದಿನೇಶ್‌ ಗುಂಡೂರಾವ್
11.‌ ಚಿಕ್ಕಬಳ್ಳಾಪುರ: ಜಮೀರ್‌ ಅಹಮದ್‌ ಖಾನ್‌
12. ಚಿಕ್ಕೋಡಿ: ಡಿ. ಸುಧಾಕರ್‌
13. ಚಿತ್ರದುರ್ಗ: ಡಾ.ಎಚ್‌.ಸಿ. ಮಹದೇವಪ್ಪ
14. ದಕ್ಷಿಣ ಕನ್ನಡ: ಮಧು ಬಂಗಾರಪ್ಪ
15. ದಾವಣಗೆರೆ: ಈಶ್ವರ ಖಂಡ್ರೆ
16. ಧಾರವಾಡ: ಲಕ್ಷ್ಮೀ ಹೆಬ್ಬಾಳ್ಕರ್‌
17. ಬಳ್ಳಾರಿ: ಶಿವಾನಂದ ಪಾಟೀಲ್‌
18. ಹಾಸನ: ಎನ್‌. ಚೆಲುವರಾಯ ಸ್ವಾಮಿ
19. ಹಾವೇರಿ: ಎಸ್‌.ಎಸ್‌. ಮಲ್ಲಿಕಾರ್ಜುನ
20. ಕೋಲಾರ: ರಾಮಲಿಂಗಾ ರೆಡ್ಡಿ
21. ಕೊಪ್ಪಳ: ಆರ್‌.ಬಿ. ತಿಮ್ಮಾಪುರ
22. ಮಂಡ್ಯ: ಡಾ.ಎಂ.ಸಿ. ಸುಧಾಕರ್‌
23. ಮೈಸೂರು: ಭೈರತಿ ಸುರೇಶ್‌
24. ರಾಯಚೂರು: ಕೆ.ಎಚ್‌. ಮುನಿಯಪ್ಪ
25. ಶಿವಮೊಗ್ಗ: ಕೆ.ಎನ್‌. ರಾಜಣ್ಣ
26. ತುಮಕೂರು: ಕೃಷ್ಣ ಬೈರೇಗೌಡ
27. ಉಡುಪಿ-ಚಿಕ್ಕಮಗಳೂರು: ಮಂಕಾಳ ವೈದ್ಯ
28. ಉತ್ತರ ಕನ್ನಡ ಎಚ್‌.ಕೆ. ಪಾಟೀಲ್‌

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!