ಹೊಸದಿಗಂತ ಡಿಜಿಟಲ್ ಡೆಸ್ಕ್ :
ಕಳೆದ ಕೆಲವು ದಿನಗಳಿಂದ ಬಿಜೆಪಿ ಕಾಂಗ್ರೆಸ್ ವಿರುದ್ದದ ಹಗರಣಗಳ ಕುರಿತ ಸಾಕ್ಷ್ಯ ಚಿತ್ರವನ್ನು ಬಿಡುಗಡೆಮಾಡುತ್ತಿದ್ದು, ಇದೀಗ ಇಂದು ‘ಕಾಂಗ್ರೆಸ್ ಫೈಲ್ಸ್’ (Congress Files) ವಿಡಿಯೊ ಅಭಿಯಾನದ ಮೂರನೇ ಕಂತನ್ನು ಬಿಡುಗಡೆ ಮಾಡಿದೆ.
ಕಾಂಗ್ರೆಸ್ (Congress) ತನ್ನ 70 ವರ್ಷಗಳ ಆಡಳಿತದಲ್ಲಿ ಸಾರ್ವಜನಿಕರಿಂದ ₹ 48,20,69,00,00,000 (4.82 ಲಕ್ಷ ಕೋಟಿ) ಲೂಟಿ ಮಾಡಿದೆ ಎಂದು ಆರೋಪಿಸಿದ ನಂತರ, ಬಿಜೆಪಿ ಎರಡು ಅವಧಿಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲಯನ್ಸ್ (UPA) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ವಿಡಿಯೊದಲ್ಲಿ 2019 ರಲ್ಲಿ ಯುಪಿಎ ₹1,86,000 ಮೌಲ್ಯದ ಕಲ್ಲಿದ್ದಲು ಹಗರಣಗಳನ್ನು ಮಾಡಿರುವುದಾಗಿ ಬಿಜೆಪಿ ಆರೋಪಿಸಿದೆ.
Congress Files के तीसरे एपिसोड में देखिए,
कोयले की दलाली में काले हुए ‘हाथ’ की कहानी… pic.twitter.com/am9L8C4hQs
— BJP (@BJP4India) April 4, 2023
‘ಕೋಯ್ಲೆ ಕಿ ದಲಾಲಿ ಮೇ ಹಾತ್ ಕಾಲಾ’ ಶೀರ್ಷಿಕೆಯ ಮೂರು ನಿಮಿಷಗಳ ವಿಡಿಯೊದಲ್ಲಿ, ಯುಪಿಎ ಆಡಳಿತದಲ್ಲಿ ಕಲ್ಲಿದ್ದಲು ಗಣಿಗಳ ಹಗರಣವನ್ನು ಬಿಜೆಪಿ ಆರೋಪಿಸಿದೆ.
ಕೊಯ್ಲೇ ಕಿ ದಲಾಲಿ ಮೇ ಹಾತ್ ಕಾಲಾ ಎಂಬುದು ಕೇವಲ ಗಾದೆಯಲ್ಲ, ಆದರೆ ವಾಸ್ತವ ಪರಿಸ್ಥಿತಿ. 2012 ರಲ್ಲಿ ಕಾಂಗ್ರೆಸ್ ತನ್ನ ಕೈ ಮಾತ್ರವಲ್ಲದೆ ಮುಖವನ್ನೂ ಕಳಂಕ ಮಾಡಿಕೊಂಡಿತು ಎಂದು ಬಿಜೆಪಿ ಕುಟುಕಿದೆ.
ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ, ಸೀಸನ್ 1, ಎಪಿಸೋಡ್ 3 ಎಂಬ ವಿಡಿಯೊದಲ್ಲಿ ಯುಪಿಎ ಆಡಳಿತದಲ್ಲಿ ಕಲ್ಲಿದ್ದಲು ಆರ್ಥಿಕತೆಗೆ ತುಂಬಾ ಸಹಕಾರಿಯಾಗಿದ್ದು,ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ ಎಂದು ಬಿಜೆಪಿ ದೂರಿದೆ. ಮನಮೋಹನ್ ಸಿಂಗ್ ಅವರು ಎರಡನೇ ಬಾರಿಗೆ ಪ್ರಧಾನಿಯಾದಾಗ, ಅವರು ಅನೇಕ ಭರವಸೆಗಳನ್ನು ನೀಡಿದರು. ಆದರೆ ಅವರ ಅಧಿಕಾರಾವಧಿಯಲ್ಲಿ ಅವರ ಭರವಸೆಗಳ ಬದಲಿಗೆ ಭ್ರಷ್ಟಾಚಾರವೇ ಹೆಚ್ಚು ಸುದ್ದಿಯಾಗಿದ್ದು ಎಂದು ಬಿಜೆಪಿ ವಿಡಿಯೊದಲ್ಲಿ ಹೇಳಿದೆ.
ಕಾಂಗ್ರೆಸ್‌ನ ‘ಕಲ್ಲಿದ್ದಲು ಹಗರಣ’ದಿಂದಾಗಿ ರಾಷ್ಟ್ರೀಯ ಖಜಾನೆಗೆ ₹1,86,000 ಕೋಟಿ ನಷ್ಟವಾಗಿದೆ. 2004-2009ರ ನಡುವೆ ಸುಮಾರು 100 ಕಂಪನಿಗಳಿಗೆ ಕಲ್ಲಿದ್ದಲು ಗಣಿಗಳನ್ನು ಸರಿಯಾಗಿ ಹರಾಜು ಮಾಡದೆ ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ ಎಂದು ವಿಡಿಯೊದಲ್ಲಿ ಹೇಳಲಾಗಿದೆ. ಕಲ್ಲಿದ್ದಲು ಗಣಿಗಳ ತಪ್ಪಾದ ಹಂಚಿಕೆಯನ್ನು ಸಿಎಜಿ ಕೂಡ ಎತ್ತಿ ತೋರಿಸಿದೆ ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್‌ನ ಆಟವು ಕಲ್ಲಿದ್ದಲು ಕಂಪನಿಗಳೊಂದಿಗೆ ಆಡಿದ್ದು ಕೇವಲ ಭಾರತೀಯ ಆರ್ಥಿಕತೆಯನ್ನು ಮಾತ್ರವಲ್ಲದೆ ಅದರ ಪ್ರತಿಷ್ಠೆಗೂ ಹಾನಿಯಾಗಿದೆ ಎಂದು ವಿಡಿಯೊದಲ್ಲಿ ಹೇಳಿದೆ.
ಇದರ ಜೊತೆಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಗಾಂಧಿ ಕುಟುಂಬದ ‘ರಿಮೋಟ್ ಕಂಟ್ರೋಲ್’ ಎಂದು ಕರೆಯುವ ಮೂಲಕ ಬಿಜೆಪಿ ವೈಯಕ್ತಿಕವಾಗಿ ವಾಗ್ದಾಳಿ ನಡೆಸಿದೆ.