ಡೆಲ್ಲಿ-ಗುಜರಾತ್ ನಡುವಿನ ಪಂದ್ಯಕ್ಕೆ ಆಗಮಿಸಿ ಸರ್ಪ್ರೈಸ್ ನೀಡಿದ ರಿಷಬ್ ಪಂತ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್ :

ಈ ಬಾರಿಯ IP ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ದೊಡ್ಡ ಆಘಾತವೆಂದರೆನಾಯಕ ರಿಷಬ್ ಪಂತ್ ಇಲ್ಲದೆ ಇರುವುದು. ಕೇವಲ ತಂಡ ಮಾತ್ರವಲ್ಲದೆ ಅಭಿಮಾನಿಗಳು ಕೂಡ ಪಂತ್ ಮಿಸ್ ಮಾಡಿಕೊಳ್ಳುತ್ತಿದ್ದಾರೆ.

ಇದೀಗ ಇಂದು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯ ನಡೆಯುತ್ತಿದ್ದು, ಇಲ್ಲಿ ಅಭಿಮಾನಿಗಳಿಗೆ ರಿಷಬ್ ಪಂತ್ ಬಂದು ಸರ್ಪ್ರೈಸ್ ನೀಡಿದ್ದಾರೆ.
ಆದ್ರೆ ಆಡುವ ಬಳಗದಲ್ಲಿ ಅವರಲಿಲ್ಲ. ಬದಲಿಗೆ ತಂಡಕ್ಕೆ ಸಪೋರ್ಟ್ ಮಾಡಲು ಆಗಮಿಸಿದ್ದಾರೆ.

ಅಪಘಾತದಿಂದ ಚೇತರಿಸಿಕೊಳ್ಳುತ್ತಿರುವ ರಿಷಬ್ ಪಂತ್ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ವಾಕ್ ಸ್ಟಿಕ್ ಹಿಡಿದು ರಿಷಬ್ ಪಂತ್ ಕ್ರೀಡಾಂಗಣಕ್ಕೆ ಆಗಮಿಸಿದ್ದಾರೆ. ಇತ್ತ ಅಭಿಮಾನಿಗಳು ರಿಷಬ್ ಪಂತ್ ಹೆಸರು ಕೂಗಿ ಬೆಂಬಲ ಸೂಚಿಸಿದ್ದಾರೆ.

ಕಾರಿನ ಮೂಲಕ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣಕ್ಕೆ ಆಗಮಿಸಿದ ರಿಷಬ್ ಪಂತ್, ಬಳಿಕ ವಾಕ್ ಸ್ಟಿಕ್ ಹಿಡಿದು ನಿಧಾನವಾಗಿ ನಡೆದುಕೊಂಡು ಕ್ರೀಡಾಂಗಣಕ್ಕೆ ಆಗಮಿಸಿದರು.ಈ ವೇಳೆ ಇತರರ ನೆರವು ಪಡೆದು ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ರಿಷಬ್ ಪಂತ್, ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಬೆಂಬಲ ಸೂಚಿಸಿದ್ದಾರೆ.

ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಡಗ್‌ ​ಔ​ಟ್‌ ಮೇಲೆ ರಿಷಬ್ ಪಂತ್ ಜರ್ಸಿಯನ್ನ ತೂಗು ಹಾಕಿತ್ತು. ಡೆಲ್ಲಿ ಫ್ರಾಂಚೈಸಿಯ ಈ ನಡೆಗೆ ಸಾಮಾ​ಜಿಕ ತಾಣ​ಗ​ಳಲ್ಲಿ ಭಾರೀ ಪ್ರಶಂಸೆ ವ್ಯಕ್ತ​ವಾ​ಗಿತ್ತು.

ಡಿಸೆಂಬರ್ 31ರ 2022ರಂದು ರಿಷಬ್ ಪಂತ್ ಭೀಕರ ಅಪಘಾತಕ್ಕೆ ತುತ್ತಾಗಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!