Friday, March 1, 2024

ಅಂಬೇಡ್ಕರ್‌ಗೆ ಭಾರತರತ್ನ ಕೊಡುವ ಮನಸ್ಸು ಕಾಂಗ್ರೆಸ್‌ಗೆ ಇರಲಿಲ್ಲ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉದ್ಯೋಗದಲ್ಲಿ ಯಾವುದೇ ರೀತಿಯ ಎಸ್‌ಸಿ, ಎಸ್‌ಟಿ ಮೀಸಲಾತಿಯನ್ನು ಜವಾಹರಲಾಲ್ ನೆಹರು ವಿರೋಧಿಸುತ್ತಿದ್ದರು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲೆ ವಂದನಾ ನಿರ್ಣಯ ಭಾಷಣ ಮಾಡಿದ ಅವರು, ‘‘ಒಬಿಸಿಗೆ ಯಾವತ್ತೂ ಸಂಪೂರ್ಣ ಮೀಸಲಾತಿ ನೀಡದ ಕಾಂಗ್ರೆಸ್ ಸಾಮಾನ್ಯ ವರ್ಗದ ಬಡವರಿಗೆ ಮೀಸಲಾತಿ ನೀಡಲಿಲ್ಲ, ಬಾಬಾ ಸಾಹೇಬರನ್ನು ಭಾರತ ರತ್ನಕ್ಕೆ ಅರ್ಹರೆಂದು ಪರಿಗಣಿಸದ ಕಾಂಗ್ರೆಸ್ ತನ್ನ ಕುಟುಂಬಕ್ಕೆ ಮಾತ್ರ ಭಾರತ ರತ್ನ ನೀಡುತ್ತಲೇ ಇದೆ. ಸಾಮಾಜಿಕ ನ್ಯಾಯದ ಪಾಠ, ನಾಯಕರಾಗಿ ಯಾವುದೇ ಗ್ಯಾರಂಟಿ ಇಲ್ಲದವರು ಮೋದಿಯವರ ಖಾತರಿಯ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.

ಅಧಿಕಾರದ ದುರಾಸೆಯಿಂದ ಪ್ರಜಾಪ್ರಭುತ್ವವನ್ನು ಬಹಿರಂಗವಾಗಿ ಕಾಂಗ್ರೆಸ್​ ಕತ್ತು ಹಿಸುಕಿದೆ. ರಾತ್ರೋ ರಾತ್ರಿ ಪ್ರಜಾಸತ್ತಾತ್ಮಕವಾಗಿ ರಚಿಸಿರುವ ಸರ್ಕಾರವನ್ನು ಹತ್ತಾರು ಬಾರಿ ವಜಾ ಮಾಡಿದ ಕಾಂಗ್ರೆಸ್​ಪತ್ರಿಕೆಗಳ ಮೇಲೆ ದಾಳಿ ಮಾಡಿದ ಕಾಂಗ್ರೆಸ್​ ದೇಶದ ಬೀಗ ಹಾಕಲು ಪ್ರಯತ್ನಿಸಿದೆ. ಈಗ ಕಾಂಗ್ರೆಸ್​ ದೇಶವನ್ನು ಒಡೆಯಲು ಪ್ರಯತ್ನಿಸುತ್ತಿದೆ.ಈಗ ದೇಶವನ್ನು ಉತ್ತರ-ದಕ್ಷಿಣ ಎಂದು ಒಡೆಯುವ ಹೇಳಿಕೆಯನ್ನು ನೀಡುತ್ತಿದೆ ಎಂದು ಮೋದಿ ಹೇಳಿದ್ದಾರೆ.

ಆದಿವಾಸಿ ಮಹಿಳೆ ರಾಷ್ಟ್ರಪತಿಯಾಗಿರುವುದನ್ನು ಕಾಂಗ್ರೆಸ್‌ ಸಹಿಸಲಿಲ್ಲ. ಈಗ ಕಾಂಗ್ರೆಸ್ಸಿಗರು ರಾಷ್ಟ್ರಪತಿ ಕುರಿತು ಅಗೌರವದಿಂದ ಮಾತನಾಡುತ್ತಿದ್ದಾರೆ. ಆದಿವಾಸಿ ಮಹಿಳೆ ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸುವ ಸಮಯದಲ್ಲಿ ಅಭ್ಯರ್ಥಿಯನ್ನು ಹಾಕದೇ ಬೆಂಬಲ ವ್ಯಕ್ತಪಡಿಸಬೇಕಿತ್ತು ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!