ಹೊಸದಿಗಂತ ವರದಿ, ಹುಬ್ಬಳ್ಳಿ:
ಮುಡಾ ಹಗರಣದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಜೀವನ ಅಂತ್ಯವಾಗಲಿದೆ ಎಂದು ಮೊದಲೇ ಹೇಳಿದ್ದೆ. ಸದ್ಯ ನ್ಯಾಯಾಲಯ ತೀರ್ಪು ಅವರ ವಿರುದ್ಧ ಬಂದಿದ್ದು, ಅವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಶಾಸಕ ಅರವಿಂದ ಬೆಲ್ಲದ ಆಗ್ರಹಿಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅಧಿಕಾರ ದುರಪಯೋಗ, ಭ್ರಷ್ಟಚಾರವನ್ನು ಪರಮಾವಧಿ ಮುಟ್ಟಿಸಿದ್ದಾರೆ. ಅವರು ಮಾಡಿದ ತಪ್ಪಿಗೆ ನ್ಯಾಯಾಲಯದ ತೀರ್ಪು ಮೊದಲ ಹಂತ ಶಿಕ್ಷೆಯಾದಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
೮೦ ಸಾವಿರ ಬಡ ಜನರಿಗೆ ಸೇರಬೇಕಾದ ಪ್ಲಾಟ್‌ಗಳನ್ನು ತಾವು ತೆಗೆದುಕೊಂಡಿದ್ದಾರೆ. ದಲಿತರ ಸೇರಬೇಕಾದ ನಿವೇಶ ಪಡೆದಿದ್ದಾರೆ. ರಾಜ್ಯಪಾಲರು ಈ ಬಗ್ಗೆ ಸ್ಪಷ್ಟನೆ ಕೇಳಿದಾಗ ಅವರು ನೀಡಲಿಲ್ಲ. ಆದ್ದರಿಂದ ರಾಜ್ಯಪಾಲರು ಅನಿವಾರ್ಯವಾಗಿ ತನಿಖೆಗೆ ಆದೇಶ ನೀಡಿದ್ದರು ಎಂದರು.
ಆದರೆ ಸಿಎಂ ಸಂವಿಧಾನಕ್ಕೆ ಬೆಲೆ ನೀಡುವ ಬದಲು ಅದರ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದರು. ಈಗ ಕೋರ್ಟ್ ಅವರ ವಿರುದ್ಧ ತೀರ್ಪು ನೀಡಿದೆ. ಇದ್ದರಿಂದ ಕಾನೂನಿನದಲ್ಲಿ ಎಲ್ಲರೂ ಸಮಾನರು ಎಂಬ ಆದೇಶ ಬಂದಿದೆ. ರಾಜ್ಯ ಜನರು ನಿರೀಕ್ಷೆಯು ಇದೆ ಆಗಿತ್ತು. ಕಾಂಗ್ರೆಸ್‌ಗೆ ಹೊಸ ಸಿಎಂ ನೋಡುವ ಅನಿವಾರ್ಯ ಬಂದಿದೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ದೊಡ್ಡ ಪಕ್ಷ ಆಗಿದೆ. ಸಿಎಂ ಸಿದ್ದರಾಮಯ್ಯ ಗೌರಯುತವಾಗಿ ರಾಜೀನಾಮೆ ನೀಡಬೇಕು. ವಿಚಾರಣೆ ನಡೆಯುವ ವೇಳೆ ಸಿಎಂ ಸ್ಥಾನದಲ್ಲಿ ಇರುವುದು ಸೂಕ್ತವಲ್ಲ. ಹೈಕಮಾಂಡ ಅವರಿಗೆ ಬೇರೆ ಅನಿವಾರ್ಯವಿಲ್ಲ. ಸಿಎಂ ರಾಜೀನಾಮೆ ನೀಡುವ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಸುಳಿವಿದ್ದು, ಅವರು ಸಹ ಟವೇಲ್ ಹಾಕಿದ್ದರು ಎಂದರು.
ಕರ್ನಾಟಕ ಹಿಂದೆ ಕಾಣದಂತ ಹಗರಣ, ಕೋಮು ಗಲಭೆ ಯಾಗುತ್ತಿವೆ. ಮೈತುಂಬ ಕಪ್ಪು ಇದ್ದವರಿಗೆ ಕಪ್ಪು ಚುಕ್ಕೆ ಇಲ್ಲ ಎಂಬುವುದು ಹಾಸ್ಯಾಸ್ಪದ. ಮಾತನಾಡುವುದು ಸಮಾಜವಾದ. ಮಾಡುವುದು ಭ್ರಷ್ಟಾಚಾರ. ಈಗ ನೋಡಿದರೆ ಬಿಜೆಪಿ ನಾಯಕರ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.