ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ಕಟುವಾದ ವಾಗ್ದಾಳಿ ನಡೆಸಿದ್ದು, ಪಕ್ಷವು ಬಡತನ ನಿರ್ಮೂಲನೆಯ ಹೆಸರಿನಲ್ಲಿ ಬಡವರನ್ನು “ಲೂಟಿ” ಮಾಡುತ್ತಿದೆ ಎಂದು ಆರೋಪಿಸಿದರು.
ಮಹಾರಾಷ್ಟ್ರದ ಪನ್ವೇಲ್‌ನಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಕಾಂಗ್ರೆಸ್ ಯಾವಾಗಲೂ ಬಡವರನ್ನು ಉಳಿಸಿಕೊಳ್ಳುವ ಅಜೆಂಡಾದಲ್ಲಿ ಕೆಲಸ ಮಾಡುತ್ತದೆ, ಪೀಳಿಗೆಯಿಂದ ಪೀಳಿಗೆಗೆ ಅವರು ‘ಗರೀಬಿ ಹಠಾವೋ’ ಎಂಬ ಸುಳ್ಳು ಘೋಷಣೆಯನ್ನು ನೀಡಿದ್ದಾರೆ. ಕಾಂಗ್ರೆಸ್ ಬಡತನ ನಿರ್ಮೂಲನೆಯ ಹೆಸರಿನಲ್ಲಿ ಬಡವರನ್ನು ಲೂಟಿ ಮಾಡಿದೆ” ಎಂದು ಕಿಡಿಕಾರಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜರನ್ನು ಶ್ಲಾಘಿಸಿದ ಪ್ರಧಾನಿ, ಭಕ್ತರು ದೇವರ ಆಶೀರ್ವಾದ ಪಡೆಯಲು ದೇವರ ಮುಂದೆ ಕುಳಿತುಕೊಳ್ಳುವ ರೀತಿಯಲ್ಲಿ, ದೇಶ ಸೇವೆಗಾಗಿ ಶಿವಾಜಿ ಮಹಾರಾಜರ ಆಶೀರ್ವಾದ ಪಡೆಯಲು ಶಿವಾಜಿ ಮಹಾರಾಜರ ಸಮಾಧಿಯ ಮುಂದೆ ಕುಳಿತುಕೊಂಡಿದ್ದೇನೆ ಎಂದು ಹೇಳಿದರು.