ಹೊಸದಿಗಂತ ವರದಿ, ತುಮಕೂರು:
ರಾಜ್ಯದ ಜನತೆಯಿಂದ ಅಧಿಕಾರ ಪಡೆದುಕೊಂಡ ಕಾಂಗ್ರೆಸ್ ಪಕ್ಷ ಕಡಿಮೆ ಅವಧಿಯಲ್ಲಿನ ಜನರ ವಿಶ್ವಾಸ ಕಳೆದುಕೊಂಡಿದೆ ಎಂದು ರಾಜ್ಯ ಬಿಜೆಪಿಯ ನೂತನ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.
ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿಯ ಕಚೇರಿ ಶಕ್ತಿ ಸೌಧಕ್ಕೆಭೇಟಿ ನೀಡಿದ ಅವರು ಶಾಸಕ ಬಿ.ಸುರೇಶ ಗಡ ಅದರಿಂದಾಗಿಯೆ ಸ್ವೀಕರಿಸಿದ ನಂತರ ಕಾರ್ಯಕರ್ತರ ನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ರಾಜ್ಯದ ಜನತೆ ಭೀಕರ ಬರಹವನ್ನು ಎದುರಿಸುತ್ತಿದ್ದಾರೆ ಆದರೆ ಇವರು ಮಾತ್ರ ಕುರ್ಚಿ ಕಿತ್ತಾಟದ ಮಗ್ನರಾಗಿದ್ದಾರೆ ಎಂದು ಆರೋಪಿಸಿದರು.
ಮುಂಬರುವ ಲೋಕಸಭಾ ನಮ್ಮ ಗುರಿ ಅತಿಹೆಚ್ಚು ಸದಸ್ಯ ರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಕೊಡುಗೆಯಾಗಿ ಕೊಡಬೇಕಾಗಿದೆ,ಆದ್ದರಿಂದ ಎಲ್ಲರೂ ಒಂದಾಗಿ ಈ ಸವಾಲನ್ನು ಸ್ವೀಕರಿಸಿದ್ದೇವೆ ಎಂದರು.
ಶಾಸಕ ಸುರೇಶ ಗೌಡರು ತಮ್ಮ ಸಂಪೂರ್ಣ ಸಹಕಾರ ನ್ನು ಘೋಷಿಸಿದರು.