ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ನಮ್ಮಹಕ್ಕು, ನಮ್ಮ ನೀರು, ಕಾವೇರಿ ನೀರು ನಮ್ಮದು. ಮೇಕೆದಾಟು ಯೋಜನೆ ಜಾರಿಗೆ ತರಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಪಕ್ಷ ಕೈಗೊಂಡಿರುವ ಪಾದಯಾತ್ರೆಗೆ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಯುವಕಾಂಗ್ರೆಸ್ ನಾಯಕಿ ಕುಸುಮಾ.ಎಚ್ ಅವರು ನೂರಾರು ಕಾರ್ಯಕರ್ತರೊಂದಿಗೆ ತೆರೆಳಿದ್ದಾರೆ.
ಮೇಕೆದಾಟುವಿನ ಕಾವೇರಿ ನದಿಗಿಳಿದು, ಕಾವೇರಿ ನಮ್ಮ ಹಕ್ಕು, ನಮ್ಮ ನೀರು ಮೇಕೆದಾಟು ನಿರ್ಮಾಣವಾಗಲೇಬೇಕೆಂದು ಘೋಷಣೆ ಕೂಗಿದರು.
ಬೆಂಗಳೂರು ನಗರದ ಜನತೆಗೆ ಕುಡಿಯುವ ನೀರಿನ ಸಮಸ್ಯೆಯಿದ್ದು ಕೂಡಲೇ ಅಣೆಕಟ್ಟೆ ಕಾಮಗಾರಿ ಪ್ರಾರಂಭವಾಗಲೇಬೇಕೆಂದು ಒತ್ತಾಯಿಸಿದರು.
ಬೆಂಗಳೂರು ಉತ್ತರ ಕಾಂಗ್ರೆಸ್ ಅಧ್ಯಕ್ಷ ಎಂ.ರಾಜ್‍ಕುಮಾರ್, ನೂರು ಟಿಎಂಸಿಗು ಅಧಿಕ ನೀರು ಸಮುದ್ರ ಪಾಲಾಗುತ್ತಿದೆ. ಅಣೆಕಟ್ಟು ನಿರ್ಮಾಣವಾದರೆ ಬೆಂಗಳೂರು ನಗರ, ಬೆಂಗಳೂರು ಸುತ್ತಮುತ್ತ ಹಲವು ತಾಲೂಕುಗಳಲ್ಲಿ ನೀರಿನ ಸಮಸ್ಯೆಯಿದ್ದು, ಅಣೆಕಟ್ಟೆ ನಿರ್ಮಾಣವಾದರೆ ನೀರಿನ ಸಮಸ್ಯೆ ಬಗೆ ಹರಿಯುತ್ತದೆ. ವಿದ್ಯುತ್ ಉತ್ಪಾದನೆಯಾಗಿ ವಿದ್ಯುತ್ ಅಭಾವ ನೀಗಲಿದೆ. ಕೇಂದ್ರ ಮತ್ತು ರಾಜ್ಯ ಸರಕಾರ ಕೂಡಲೇ ಯೋಜನೆ ಕೈಗೊಳ್ಳಬೇಕೆಂದು ಆಗ್ರಹಿಸಿದರು.