ರಾಮನಗರದಲ್ಲಿ ಕಾಂಗ್ರೆಸ್ ಹೈಡ್ರಾಮಾ: ಬಿಗಿ ಪೊಲೀಸ್ ಬಂದೋಬಸ್ತ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೇಕೆದಾಟು ಪಾದಯಾತ್ರೆ ಹಿನ್ನೆಲೆಯಲ್ಲಿ ರಾಮನಗರ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ಮೇಕೆದಾಟು ಪಾದಯಾತ್ರೆ ಐದನೇ ದಿನಕ್ಕೆ ಕಾಲಿರಿಸಿದೆ. ಪಾದಯಾತ್ರೆ ವಿರುದ್ಧ ರಾಜ್ಯ ಹೈ ಕೋರ್ಟ್ ಗರಂ ಆಗಿದ್ದು, ಕೊರೋನಾ ಬಗ್ಗೆ ಚಿಂತಿಸಿ ಎಂದಿದೆ. ಇಷ್ಟಾದರೂ ಪಾದಯಾತ್ರೆ ನಿಲ್ಲಿಸದ ಕೈ ನಾಯಕರು ಕೋರ್ಟ್ ನೊಟೀಸ್ ಕೈಯಲ್ಲಿ ಹಿಡಿದೇ ಪಾದಯಾತ್ರೆಗೆ ತಯಾರಾಗಿದ್ದಾರೆ.

ಈ ಕಾರಣದಿಂದ ಭಾರೀ ಸಂಖ್ಯೆಯಲ್ಲಿ ಪೊಲೀಸ್ ಪಡೆ ರಾಮನಗರ ತಲುಪಿದೆ. ಈಗಾಗಲೇ ಕೈ ನಾಯಕರ ವಿರುದ್ಧ ನಾಲ್ಕು ಎಫ್‌ಐಆರ್ ದಾಖಲಾಗಿದೆ. ರಾಮನಗರ ಗಡಿ ಭಾಗದಲ್ಲಿ ಈಗಾಗಲೇ ಬ್ಯಾರಿಕೇಡ್ ಹಾಕಲಾಗಿದೆ, ಪಾದಯಾತ್ರೆಗೆ ಬರುವ ಜನರನ್ನು ತಡೆಯಲು ಪೊಲೀಸರು ಸಿದ್ಧರಾಗಿದ್ದಾರೆ.

ರಾಮನಗರದಲ್ಲಿ ಐವರು ಡಿವೈಎಸ್‌ಪಿ, 16 ಮಂದಿ ಇನ್ಸ್‌ಪೆಕ್ಟರ‍್ಸ್, 27 ಪಿಎಸ್‌ಐ, 176 ಎಎಸ್‌ಐ, 800 ಕಾನ್ಸ್‌ಟೇಬಲ್‌ಗಳು, 4 ಡಿಎಆರ್, 8 ಎಎಸ್‌ಆರ್‌ಪಿ ತುಕಡಿ ಸೇರಿ 1,200 ಸಿಬ್ಬಂದಿ ಪೊಲೀಸ್ ಫೀಲ್ಡ್‌ಗೆ ಇಳಿದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!